ವರ್ಷದ ಮೊದಲ ಸೂರ್ಯಗ್ರಹಣ : ಯಾವುದೇ ಪರಿಣಾಮವಿಲ್ಲ : ಎಚ್.ಎಸ್.ಟಿ.ಸ್ವಾಮಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಇದೇ ತಿಂಗಳ 16 ರಂದು ಚಂದ್ರಗ್ರಹಣ ಸಂಭವಿಸಿತ್ತು. ಆದರೆ ಭಾರತದಲ್ಲಿ ಹಗಲಿನಲ್ಲಿ ಇದ್ದುದರಿಂದ ಗೋಚರಿಸಿರಲಿಲ್ಲ. ಇದೀಗ 29 ರಂದು ಸಂಜೆ 4.25 ರಿಂದ 30 ರ ಮಧ್ಯಾಹ್ನದವರೆಗೂ ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ ಈ ಗ್ರಹಣವೂ ಸಹಾ ಭಾರತದಲ್ಲಿ ಎಲ್ಲಿಯೂ ಗೋಚರಿಸುವುದಿಲ್ಲ.

ಉತ್ತರ ಮತ್ತು ಪೂರ್ವ ಅಮೆರಿಕಾ, ಕೆನಡಾ, ಆಫ್ರಿಕಾ, ಯುರೋಪ್ ಖಂಡದ ಕೆಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣವನ್ನು ಅವರು ನೋಡಬಹುದಾಗಿದೆ. ಆದರೂ ನಮ್ಮ ದೇಶದ ಜನರಲ್ಲಿ ಗ್ರಹಣದ ಪರಿಕಲ್ಪನೆ ಬೇರೆಯೇ ಇರುತ್ತದೆ. ಗ್ರಹಣ ಎಂಬುದು ಆಕಾಶದಲ್ಲಿ ನಡೆಯುವ ನೆರಳು ಬೆಳಕಿನ ಆಟವಷ್ಟೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಅವು ಒಂದೇ ಸಮತಲದಲ್ಲಿ ಇದ್ದಾಗ ಮಾತ್ರ ಸೂರ್ಯಗ್ರಹಣ ಸಂಭವಿಸಲು ಸಾಧ್ಯ. ಅನೇಕ ಗಂಟೆಗಳ ಕಾಲ ಚಂದ್ರ ಸೂರ್ಯನನ್ನು 85 ರಷ್ಟು ಮರೆಮಾಡಿರುತ್ತಾನೆ. ಹಾಗಾಗಿ ಭಾಗಶಃ ಸೂರ್ಯಗ್ರಹಣವನ್ನು ನೋಡಬಹುದಾಗಿದೆ. ಇದರಿಂದ ಯಾವುದೇ ರೀತಿಯ ಭಯ, ಆತಂಕ ಪಡುವ ಅಗತ್ಯವಿಲ್ಲ. ಗರ್ಭಿಣಿಯರಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಪಶು ಪಕ್ಷಿಗಳ ಮೇಲೆಯೂ ಯಾವುದೇ ಪರಿಣಾಮವಿಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *