ಬೆಂಗಳೂರು: ಒಂದು ಕಡೆ ದೀಪಾವಳಿ ಹಬ್ಬದ ಸಂಭ್ರಮ ಎಲ್ಲರ ಮನೆಯಲ್ಲೂ ಜೋರಾಗಿಯೇ ನಡೆದಿದೆ. ಅದರ ನಡುವೆ ಆಸ್ಪತ್ರೆಯಲ್ಲಿ ನರಳುವವರ ನೋವು ಕಾಣಿಸಿದೆ. ಹೌದು ದೀಪಾವಳಿಯಂದು ಪಟಾಕಿ ಹೊಡೆದು ಅವಘಡ ಮಾಡಿಕೊಂಡವರ ಸಂಖ್ಯೆಯೂ ಕಡಿಮೆ ಏನಿಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ಪಟಾಕಿ ಅವಘಡಕ್ಕೆ ಬಾಲಕರೇ ತುತ್ತಾಗಿದ್ದಾರೆ. ನಗರದ ಬಸವನಗುಡಿಯಲ್ಲಿ 9 ವರ್ಷದ ಬಾಲಕ ಪ್ಲವರ್ ಪಾಟ್ ಹಚ್ಚಲು ಹೋಗಿ ಅವಘಡ ಸಂಭವಿಸಿದೆ. ಹಾಗೇ ದೊಡ್ಡಹಳ್ಳಲಾಸಂದ್ರದ 6 ವರ್ಷದ ಬಾಲಕ ಪ್ಲವರ್ ಪಾಟ್ ಹಂಚಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾನೆ. ಕನಕಪುರದಲ್ಲಿ 9 ವರ್ಷದ ಬಾಲಕ ಬಿಜಿಲಿ ಸಿಡಿಸಲು ಹೋಗಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾನೆ.
ಪಟಾಕಿ ಸಿಡಿಸಲು ಹೋಗಿ ತೊಂದರೆಗೆ ಸಿಲುಕಿದ ಅದೆಷ್ಟೋ ಘಟನೆಗಳು ನಗರದ ಇತರೆ ಆಸ್ಪತ್ರೆಗಳಲ್ಲಿ ದಾಖಲಾಗಿದೆ. ನಾರಾಯಣ ನೇತ್ರಾಲಯ ಒಂದರಲ್ಲೇ 30 ಕೇಸ್ ಪಟಾಕಿ ಸಿಡಿತದಿಂದ ದಾಖಲಾಗಿವೆ. ಬೇರೆ ಬೇರೆ ಆಸ್ಪತ್ರೆಗಳಲ್ಲಿ 15 ಕೇಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವಾಗ ಸಂಭವಿಸಿದ ತೊಂದರೆಯಿಂದಾಗಿ ಒಟ್ಟು 60 ಜನಕ್ಕೆ ತೊಂದರೆಯಾಗಿದೆ. ಪಟಾಕಿ ಹೊಡೆಯುವುದನ್ನ ನೋಡಲು ಹೋಗಿಯೂ 10 ಜನಕ್ಕೆ ತೊಂದರೆಯಾಗಿದೆ. ಪಟಾಕಿ ಹಚ್ಚಿದ ಪರಿಣಾಮ 20 ಮಂದಿಗೆ ತೊಂದರೆಯಾಗಿದೆ.
ಪ್ರತಿ ವರ್ಷ ಕೂಡ ಪಟಾಕಿ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದ್ರೂ ಭಯವೇ ಇಲ್ಲದ ಹಾಗೇ ಪಟಾಕಿ ಹೊಡೆಯುತ್ತಲೆ ಇದ್ದಾರೆ. ಕೊಂಚ ಎಚ್ಚರ ತಪ್ಪಿದ್ರು ಭಾರೀ ಅನಾಹುತವಾಗುತ್ತೆ ಅಂತ ಗೊತ್ತಿದ್ರು, ದುಡುಕುತ್ತಾರೆ. ಈಗ 60 ಜನರು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದಷ್ಟು ಬೇಗ ಅವರ ದೃಷ್ಟಿ ಸರಿಯಾಗಲಿ ಎಂದೇ ಪ್ರಾರ್ಥಿಸೋಣ