ಜನಾರ್ದನ ರೆಡ್ಡಿ, ಶ್ರೀರಾಮುಲು ಮಾಡೆಲ್ ಹೌಸ್ ಗೆ ಬೆಂಕಿ..!

1 Min Read

ಬಳ್ಳಾರಿ: ಬ್ಯಾಬರ್ ಗಲಾಟೆ ವಿಚಾರ ಬಳ್ಳಾರಿಯಲ್ಲಿ ಇನ್ನು ಮಾಸಿಲ್ಲ ಅದಾಗಲೇ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸಂಬಂಧಿಸಿದ ಮಾಡೆಲ್ ಹೌಸ್ ಗೆ ಬೆಂಕಿ ತಾಗಿದೆ. ಜಿ ಸ್ಕೈರ್ ಲೇಔಟ್ ನಲ್ಲಿರುವ ಮಾಡೆಲ್ ಹೌಸ್ ಗೆ ಬೆಂಕಿ ಬಿದ್ದಿದೆ. ಈ ಮಾಡೆಲ್‌ ಹೌಸ್ ಒಟ್ಟು 109 ಎಕರೆಯಲ್ಲಿದೆ. ಟೋಟಲ್ ಜಿ ಸ್ವ್ಕೇರ್ ಹೊಂದಿದೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಇಬ್ಬರ ಹೆಸರಿನಲ್ಲೂ ಇದ್ದು, 13-14 ವರ್ಷಗಳ ಹಿಂದೆಯೇ ಮಾಡಲಾಗಿದೆ.

ಈ ಘಟನೆ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಬ್ಯಾನರ್ ಗಲಾಟೆಯಾಗಿ ಇನ್ನೂ 15 ದಿನಗಳು ಸಹ ಕಳೆದಿಲ್ಲ. ಆಗಲೇ ಇಂತಹ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಬಳ್ಳಾರಿ ಎಸ್ಪಿ ಜೊತೆಗೆ ನಾನು ಮಾತನ್ನಾಡಿದ್ದೇನೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದರು. ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಈಗ ಬೆಂಕಿ ಹಚ್ಚಿದ್ದಾರೆ. ನಮಗೆ ಸೇರಿದ ಮಾಡೆಲ್ ಹೌಸ್​ಗೆ ಬೆಂಕಿ ಹಚ್ಚಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಖರೀದಿದಾರರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಿಸಿದ್ದೆವು. ಇಂದು (ಜನವರಿ 23) ಸಂಜೆ ಆರೂವರೆ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹಚ್ಚಿದವರನ್ನ ಹಿಡಿಯಲು ಕೆಲವರು ಯತ್ನಿಸಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಬ್ಯಾನರ್ ಗಲಾಟೆಯ ಬೆಂಕಿಯೇ ಇನ್ನು ತಣ್ಣಗಾಗಿಲ್ಲ ಆಗಲೇ ಮತ್ತೊಂದಹ ಅವಘಡ ಬಳ್ಳಾರಿಯಲ್ಲಿ ನಡೆದಿರೋದು ದುರಂತವೇ ಸರಿ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರ ಬರಬೇಕಿದೆ.

Share This Article