ಮೈಸೂರು: ಸ್ವಲ್ಪ ಯಾಮಾರಿದ್ರೂ ದೊಡ್ಡ ಅನಾಹುತವೇ ಆಗ್ತಾ ಇತ್ತು. ಆ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಾಲಾ ಮಕ್ಕಳಿದ್ದ ಬಸ್ ಗೆ ಬೆಂಕು ತಗುಲಿ ಧಗಧಗನೇ ಹೊತ್ತಿ ಉರಿದಿದೆ.
ಈ ಘಟನೆ ನಡೆದಿರೋದು ಮೈಸೂರಿನ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ. DTMN ಶಾಲೆಗೆ ಸೇರಿದ ಬಸ್ ಗಳು ಹೀಗೆ ಧಗಧಗನೆ ಹೊತ್ತಿ ಉರಿದಿದು, ಸುಟ್ಟು ಕರಕಲಾಗಿದೆ. ಈ ಬಸ್ ನಲ್ಲೇ ಮಕ್ಕಳನ್ನ ಶಾಲೆಗೆ ಕರೆತರಲಾಗಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.
ಬಸ್ ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ತಿಳಿದು ಬಂದಿಲ್ಲ. ಒಂದ್ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇನ್ನು ಹಲವು ಬಸ್ ಗಳಿಗೆ ಬೆಂಕಿ ತಾಗಿದೆ. ಮಕ್ಕಳನ್ನ ಬಸ್ ನಿಂದ ಕೆಳಗಿಳಿಸಿದ ಬಳಿಕ ಈ ಘಟನೆ ನಡೆದಿದೆ.