ಶಿಲ್ಲಾಂಗ್: ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಯಲ್ಲೆಲ್ಲಾ ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಅಲ್ಲಿನ ಉಡುಗೆ – ತೊಡುಗೆಗಳನ್ನೇ ತೊಡುತ್ತಾರೆ. ಇತ್ತೇಚೆಗೆ ಶಿಲ್ಲಾಂಗ್ ಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಲ್ಲಿನ ವಿಶೇಷ ಉಡುಪನ್ನು ಧರಿಸಿದ್ದರು. ಈ ಸಾಂಪ್ರದಾಯಿಕ ಖಾಸಿ ಉಡುಪಿನ ಬಗ್ಗೆ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ವ್ಯಂಗ್ಯವಾಡಿದ್ದರು.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಕೀರ್ತಿ ಆಜಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಧಾನಿ ಮೋದಿ ಅವರು ತೊಟ್ಟಿದ್ದ ಖಾಸಿ ಉಡಿಗೆಯ ಫೋಟೋವನ್ನು ಟ್ವೀಟ್ ಮಾಡಿ, ಇದು ಮಹಿಳೆಯರು ತೊಡುವ ಉಡುಗೆ. ಗಂಡು ಅಲ್ಲ, ಹೆಣ್ಣು ಅಲ್ಲ. ಫ್ಯಾಷನ್ ನ ಆರಾಧಕ ಮಾತ್ರ ಎಂದು ಬರೆದಿದ್ದರು. ಕೀರ್ತಿ ಆಜಾದ್ ಪೋಸ್ಟ್ ಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿತ್ತು.
ಬಳಿಕ ಅದನ್ನು ಸಮರ್ಥನೆ ಮಾಡಿಕೊಂಡಿದ್ದ ಕೀರ್ತಿ ಆಜಾದ್, ನಾನು ಉಡುಪಿನ ಬಗ್ಗೆ ಹೇಳಿದ್ದಲ್ಲ. ನನಗೆ ಉಡುಪಿಗೆ ಅಗೌರವಿಸುವ ಉದ್ದೇಶ ನನಗಿರಲಿಲ್ಲ. ಮೋದಿಯವರ ಫ್ಯಾಷನ್ ಬಗ್ಗೆ ಹೇಳಲು ಬಯಸಿದ್ದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದರು. ಇದೀಗ ಅವರ ಮೇಲೆ ಸದಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.