Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆರ್ಥಿಕ ಸಂಕಷ್ಟವೇ ಗುರುಪ್ರಸಾದ್ ಜೀವ ಕಳೆದುಕೊಳ್ಳುವಂತೆ ಮಾಡೀತಾ..?

---Advertisement---

ನಿರ್ದೇಶಕ, ಬರಹಗಾರ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆದರೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಹತ್ತು ದಿನಗಳೇ ಕಳೆದಿವೆ. ದೇಹ ಕೊಳೆತ ಸ್ಥಿತಿಗೆ ತಲುಪಿತ್ತು. ಅಷ್ಟಕ್ಕೂ ಗುರುಪ್ರಸಾದ್ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗಿದೆ. ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಸಾಲು ಸಾಲು ಸಿನಿಮಾಗಳ ಸೋಲು ಅವರನ್ನು ಕಂಗೆಡಿಸಿತ್ತು. ಹಲವು ಚಟಗಳಿಗೆ ಗುರುಪ್ರಸಾದ್ ಅಂಟಿಕೊಂಡು ಬಿಟ್ಟಿದ್ದರು ಎಂದು ಅವರ ಆಪ್ತ ಮೂಲವೇ ಹೇಳುತ್ತಿದೆ. ಜೊತೆಗೆ ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟವೂ ಅವರನ್ನು ಕಾಡುತ್ತಿತ್ತಂತೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಗುರುಪ್ರಸಾದ್, ಪದೇ ಪದೇ ಮನೆ ಬದಲಿಸುತ್ತಿದ್ದರಂತೆ. ಹೀಗಾಗಿ ಗುರುಪ್ರಸಾದ್ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕೇಸ್ ಕೂಡ ದಾಖಲಾಗಿತ್ತು. ಆದರೆ ಈಗ ಅವರೇ ಇಲ್ಲವಾಗಿದ್ದಾರೆ.

ಯಾವ ರೀತಿಯಲ್ಲಿ ಮನೆ ಚೇಂಜ್ ಮಾಡ್ತಾ ಇದ್ರು ಅಂದ್ರೆ, ಬಸವೇಶ್ವರ ನಗರದ ಬಳಿ ಬಾಡಿಗೆ ಮನೆಯಲ್ಲಿದ್ದ ಗುರುಪ್ರಸಾದ್ ಬಳಿಕ ಜಯನಗರದಲ್ಲಿ ಬಾಡಿಗೆ ಮನೆ ಪಡೆದಿದ್ದರು. ಅಷ್ಟೇ ಅಲ್ಲ ಕೆಲ ದಿನಗಳ ಕಾಲ ಹೊಟೇಲ್ ರೂಮಿನಲ್ಲೂ ವಾಸವಿದ್ದರು. ಸಾಲಗಾರರ ಕಾಟ ತಾಳಲಾರದೆ ಬಾಡಿಗೆ ಮನೆಯನ್ನು ಬದಲಾಯಿಸುತ್ತಲೇ ಇದ್ದರು. ಇತ್ತೀಚೆಗಷ್ಟೇ ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಿದ್ದರು. ಆದರೆ ಈ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆದ ವಿಚಾ್ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ. ಇದೇ ಅಪಾರ್ಟ್ಮೆಂಟ್ ನಲ್ಲಿ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಇತಿಮಿತಿಗೂ ಮೀರಿ ಸಾಲ ಮಾಡಿಕೊಂಡಿದ್ದ ಗುರು ಪ್ರಸಾದ್ ಈಗ ಎಲ್ಲರನ್ನು ಬಿಟ್ಟು ಬಾರದಲೋಕಕ್ಕೆ ಹೋಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...