ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ರೀತಿಯ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಪಕ್ಷ ಪಕ್ಷದಲ್ಲಿಯೇ ಕಾಂಪಿಟೇಷನ್ ಶುರುವಾಗಿದೆ. ಇದೀಗ ಶ್ರೀರಾಮಸೇನೆ ಹಾಗೂ ಬಿಜೆಪಿ ನಡುವೆ ಚುನಾವಣಾ ಯುದ್ಧ ನಡೆಯಲಿದೆ. ಕಾರ್ಕಳದಿಂದ ಮುತಾಲಿಕ್ ಹಾಗೂ ಸುನಿಲ್ ಕುಮಾರ್ ಎದುರು ಬದುರಾಗಲಿದ್ದಾರೆ.
ಈಗಾಗಲೇ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಾನು ಕಾರ್ಕಳದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಘೊಷಣೆ ಮಾಡಿಕೊಂಡಿದ್ದಾರೆ. ಅವರ ಬೆಂಬಲಿಗರು ಕೂಡ ಬಿಜೆಪಿಗೆ ಮನವಿ ಮಾಡಿದ್ದಾರೆ. ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿಯ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಬೇಡಿ. ಬಿಜೆಪಿಯಿಂದಾನೇ ಟಿಕೆಟ್ ಕೊಟ್ಟರು ಓಕೆ. ಇಲ್ಲವಾದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾರೆ. ಆದರೆ ಅಭ್ಯರ್ಥಿ ಹಾಕಬೇಡಿ ಎಂದಿದ್ದಾರೆ.
ಈ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಕಾರ್ಕಳದಲ್ಲಿ ಶಾಸಕ ಸುನಿಲ್ ಕುಮಾರ್ ಇದ್ದಾರೆ. ಮೂರು ಬಾರಿ ಗೆದ್ದಿದ್ದಾರೆ. ಸಚಿವ ಕೂಡ ಆಗಿದ್ದಾರೆ. ಅವರು ಮನವಿ ಮಾಡಿದ್ದಾರೆ. ಮಾಡಲಿ. ನಮ್ಮ ರಾಷ್ಟ್ರೀಯ ಪಕ್ಷ. 224 ಕ್ಷೇತ್ರದಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದಿದ್ದಾರೆ.