Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫಿಫಾ ವಿಶ್ವಕಪ್ 2026: ಅರ್ಜೆಂಟಿನಾ ವಿರುದ್ಧ ಭರ್ಜರಿ ಜಯ ಗಳಿಸಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್

---Advertisement---

ಇಡೀ ಕ್ರೀಡಾಲೋಕವೇ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ 2026ರ ಫಿಫಾ ವಿಶ್ವಕಪ್ ಮಹಾಸಮರಕ್ಕೆ ಅಧಿಕೃತ ತೆರೆ ಬಿದ್ದಿದ್ದು, ಬಲಿಷ್ಠ ಅರ್ಜೆಂಟಿನಾ ತಂಡವನ್ನು 1-0 ಅಂತರದಿಂದ ಮಣಿಸಿದ ಸ್ಪೇನ್ ಐತಿಹಾಸಿಕ ವಿಜಯ ಪತಾಕೆ ಹಾರಿಸಿದೆ. ಈ ಮೂಲಕ ಸ್ಪೇನ್ ತಂಡ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಈ ಫೈನಲ್ ಪಂದ್ಯದ ನಿಗದಿತ 90 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು ಯಾವುದೇ ಗೋಲ್ ಗಳಿಸಲು ಸಾಧ್ಯವಾಗಲಿಲ್ಲ. ಅರ್ಜೆಂಟಿನಾದ ಗೋಲ್ಕೀಪರ್ ಎಮೆಲಿಯಾನೋ ಮಾರ್ಟಿನೆಸ್ ಸ್ಪೇನ್ ತಂಡದ ಸತತ ಆಕ್ರಮಣಗಳನ್ನು ಅದ್ಭುತವಾಗಿ ತಡೆದು ಬಂಡೆಯಂತೆ ನಿಂತಿದ್ದರು. ಹೀಗಾಗಿ ಪಂದ್ಯ ಎಕ್ಸ್ಟ್ರಾ ಟೈಮ್ಗೆ (ಹೆಚ್ಚುವರಿ ಸಮಯ) ತಲುಪಿತು. ಅಂತಿಮವಾಗಿ ಪಂದ್ಯದ 106ನೇ ನಿಮಿಷದಲ್ಲಿ ಫೆರ್ನಾಂಡಿಸ್ ವಿಲಿಯಮ್ಸ್ ಪಾಸ್ ಮಾಡಿದ ಬಾಲ್ ಅನ್ನು ಫೆರಾನ್ ಟಾರೆಸ್ ಅತ್ಯದ್ಭುತವಾಗಿ ಗೋಲ್ ಆಗಿ ಪರಿವರ್ತಿಸುವ ಮೂಲಕ ಸ್ಪೇನ್ ತಂಡಕ್ಕೆ ವಿಜಯ ತಂದುಕೊಟ್ಟರು.

ಭಗ್ನಗೊಂಡ ಲಿಯೋನಲ್ ಮೆಸ್ಸಿ ಕನಸು:
ಈ ಸೋಲಿನೊಂದಿಗೆ ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್ ಆಗಬೇಕೆಂಬ ಅರ್ಜೆಂಟಿನಾದ ಕನಸು ಭಗ್ನಗೊಂಡಿದೆ. ಕೊನೆಯ ವಿಶ್ವಕಪ್ ಪಂದ್ಯದಲ್ಲಿ ಗೆಲುವಿನೊಂದಿಗೆ ವಿಧಾಯ ಹೇಳಬೇಕೆಂಬ ತವಕದಲ್ಲಿದ್ದ ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಅವರಿಗೆ ತೀವ್ರ ನಿರಾಸೆಯಾಗಿದ್ದು, ಪಂದ್ಯ ಮುಗಿಯುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರಿಟ್ಟರು. ಅರ್ಜೆಂಟಿನಾ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

Join WhatsApp

Join Now

Join Telegram

Join Now