ಶೀಘ್ರವೇ ಬಿಎಡ್ ಕಾಲೇಜುಗಳ ಶುಲ್ಕ ಹೆಚ್ಚಳ

1 Min Read

ಬೆಂಗಳೂರು: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಧು ಜಿ ಮಾದೇಗೌಡ ಅವರು ಕೇಳಿದ ಬಿಎಡ್ ಕಾಲೇಜುಗಳ ಪ್ರಶ್ನೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಬಿ.ಎಡ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ ಎಂದಿದ್ದಾರೆ.

ರಾಜ್ಯದ ಬಿ.ಎಡ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಕ್ರಮ ತೆಗೆದುಕೊಳ್ತೀವಿ. ಅನೇಕ ವರ್ಷಗಳಿಂದ ಬಿ.ಎಡ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಮಾಡಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಬಿ.ಎಡ್ ಕಾಲೇಜುಗಳ ಶುಲ್ಕ ಜಾಸ್ತಿ ಇದೆ. ಹೀಗಾಗಿ ರಾಜ್ಯದಲ್ಲೂ ಶುಲ್ಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದೆ. ಶುಲ್ಕ ಪರಿಷ್ಕರಣೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ 6 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದೆ. ವರದಿ ಬಂದ ಕೂಡಲೇ ಬಿ.ಎಡ್ ಕಾಲೇಜುಗಳ ಪರಿಷ್ಕರಣೆ ಮಾಡ್ತೀವಿ. ಈ ಶೈಕ್ಷಣಿಕ ವರ್ಚವೇ ಶುಲ್ಕ ಪರಿಷ್ಕರಣೆ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಅವರು ಪ್ರಶ್ನೆ ಕೇಳಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಉತ್ತಮ. ಆದರೆ ಎಲ್ಲಾ ವಿವಿಯಲ್ಲಿ ಏಕರೂಪ ವೇಳಾಪಟ್ಟಿ ಜಾರಿ ಆಗುತ್ತಿಲ್ಲ. ರಾಜ್ಯದ ಎಲ್ಲಾ ವಿವಿಗಳು ಏಕರೂಪದ ವೇಳಾಪಟ್ಟಿಯಂತೆ ನಡೆಯಲು ಕ್ರಮ ಆಗಬೇಕು. ಖಾಸಗಿ ವಿವಿಗಳನ್ನು ಸರ್ಕಾರ ಏಕರೂಪ ವೇಳಾಪಟ್ಟಿ ಅಡಿ ತರಬೇಕು ಅಂತ ಒತ್ತಾಯಿಸಿದೆ ಎಂದಿದ್ದಾರೆ. ಇದಕ್ಕೆ ಉತ್ತರಸಿದ ಸುಧಾಕರ್ ಅವರು, 2021ರಲ್ಲಿ UYCMS ಜಾರಿ ಮಾಡಿದ್ದೇವೆ. ಇದರ ಅಡಿ ಎಲ್ಲಾ ವಿವಿಗೂ ಏಕರೂಪದ ವೇಳಾಪಟ್ಟಿ ಮಾಡುತ್ತಾ ಇದ್ದೇವೆ. ಕೋವಿಡ್ ಸಮಯದಲ್ಲಿ ಒಂದೊಂದು ವಿವಿಯಲ್ಲಿ ಒಂದೊಂದು ವ್ಯವಸ್ಥೆ ಇತ್ತು ಎಂದಿದ್ದಾರೆ.

Share This Article