ಚಾಮರಾಜನಗರ: ಮಂಗಳೂರಿನಲ್ಲಿ ಮಸೀದಿ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು. ಅದು ಕೇಶವಾ ಕೃಪದಲ್ಲಿ ನಿರ್ಧರಿಸಿದಂತೆ ಆಗುತ್ತೆ ಎಂಬುದಾಗಿ. ಈ ಬಗ್ಗೆ ಇದೀಗ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ಕನ್ನಡದ ಗಾದೆ ಕೇಳಿದ್ದೀರಾ ಅಲ್ವಾ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬುದನ್ನು. ಹೆಂಡತಿ ಬಗ್ಗೆ ಏನು ಇಲ್ಲದೆ ಇದ್ದಾಗ ಮೊಸರಲ್ಲಿ ಕಲ್ಲು ಹುಡುಕುವುದಕ್ಕೆ ಹೊರಡುತ್ತಾರೆ. ಆ ರೀತಿಯಲ್ಲಿ ಎಂದು ವ್ಯಂಗ್ಯವಾಡಿದ್ದಾರೆ.
ಯಾವುದು ತಾತ್ವಿಕ ವಿಚಾರಗಳು ಇವರ ಬಳಿ ಇಲ್ಲದೆ ಇದ್ದಾಗ ವೈಚಾರಿಕ ವಿಚಾರಗಳನ್ನು ಇಟ್ಟುಕೊಂಡು ಈ ರೀತಿ ಮಾತನಾಡುತ್ತಾರೆ. ಕೇಶವ ಕೃಪಕ್ಕೂ, ಮಂಗಳೂರಿಗೂ, ದೇವಸ್ಥಾನಕ್ಕೂ. ಕಾಶಿನೇ ಉದಾಹರಣೆ. ಏನು ಆರ್ ಎಸ್ ಎಸ್ ಹೇಳಿತ್ತಾ ಮಸೀದಿ ಇದೆ ಅಂತ. ಅಲ್ಲಿ ಯಾರೋ ಭಕ್ತಾಧಿಗಳು ಸುಪ್ರೀಂ ಕೋರ್ಟ್ ಹೋಗಿದ್ದಾರೆ. ಕೋರ್ಟ್ ಬಳಿಕ ಹೇಳಿತು ಅಲ್ಲಿನ ಕಮಿಷನರ್ ಗೆ ಅಲ್ಲಿ ಹೋಗಿ ಏನು ಮಾಡಬೇಕು ಅಂತ.
ಅದು ಕೇಶವಕೃಪಾಗೆ ಬಂತಾ. ಅಥವಾ ಡೆಲ್ಲಿಯ ಕಾರ್ಯಾಲಯದಲ್ಲಿ ನಿಶ್ಚಯವಾಗಿತ್ತಾ. ಇದ್ಯಾವುದು ಅಲ್ಲ ಏನು ತೋರದೆ ಇದ್ದರೆ ಹೀಗೆ . ಇನ್ನು ಅವರು ಆ ಭ್ರಮೆನಲ್ಲಿದ್ದಾರೆ. ಮುಸಲ್ಮಾನರ ವೋಟನ್ನು ಆರ್ ಎಸ್ ಎಸ್ ನ ಬೈದರೆ ಆಯ್ತು ಅಂತ. ಇತ್ತೀಚೆಗೆ ಅವರಿಗೆ ಹೆದರಿಕೆಯೂ ಶುರುವಾಗಿದೆ. ಮುಸಲ್ಮಾನರ ವೋಟು ಬಿಜೆಪಿಗೆ ಬರಬಹುದು ಅಂತ. ಸರ್ವೇಗಳು ಆ ರೀತಿಯಾಗಿದೆ. ಉತ್ತರಪ್ರದೇಶದಲ್ಲಿ ಮುಸಲ್ಮಾನರು ಜಾಸ್ತಿ ಇರುವ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಾದ ಮೇಲೆ ಕಾಂಗ್ರೆಸ್ ಮತ್ತು ದಳಕ್ಕೆ ಯೋಚನೆ ಶುರುವಾಗಿದೆ ಎಂದಿದ್ದಾರೆ.