ಕಾಲ ಈಗ ಅದೆಷ್ಟು ಬದಲಾಗಿದೆ ಅಲ್ವಾ. ಗ್ರಾಮೀಣ ಭಾಗದಲ್ಲಿ ಹೆಣ್ಣು ಎಂದರೆ ಮೂಗು ಮುರಿಯುತ್ತಿದ್ದರು. ಗಂಡು ಮಗುವೇ ಬೇಕು ಎನ್ನುತ್ತಿದ್ದರು. ಆದರೆ ಈಗ ಹಳ್ಳಿ ಜನರೇ ಬದಲಾಗಿದ್ದಾರೆ. ಹೆಣ್ಣು ಮಕ್ಕಳೇ ಹುಟ್ಟಲಿ ದೇವರೇ ಅಂತ ಬೇಡಿಕೊಳ್ಳುತ್ತಾರೆ. ಅಂಥದ್ರಲ್ಲಿ ಮೆಗಾಸ್ಟಾರ್ ಅಂತ ಕರೆಸಿಕೊಳ್ಳುವ ಚಿರಂಜೀವಿ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ ರೀತಿಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಸಿನಿಮಾ ಒಂದರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮನೆಯ ಬಗ್ಗೆ, ಮನೆಯಲ್ಲಿರುವ ಹೆಣ್ಣು ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ನಮ್ಮ ಮನೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಮನೆಯಲ್ಲಿದ್ದಾಗ ಮಕ್ಕಳೊಟ್ಟಿಗೆ ಇದ್ದೇನೆ ಎನಿಸುವುದಿಲ್ಲ, ಬದಲಿಗೆ ಲೇಡೀಸ್ ಹಾಸ್ಟೆಲ್ ನ ವಾರ್ಡನ್ ಆಗಿದ್ದೇನೆ ಎನಿಸುತ್ತದೆ. ರಾಮ್ ಚರಣ್ ಗಂಡು ಮಗುವಿಗೆ ಜನ್ಮ ನೀಡಲಿ ಎಂಬುದು ನನ್ನ ಬಯಕೆ ಆಗಿತ್ತು. ನಮ್ಮ ತಲೆಮಾರನ್ನು ರಾಮ್ ಚರಣ್ ಮಗ ಮುಂದೆ ತೆಗೆದುಕೊಂಡು ಹೋಗಲಿ ಎಂಬ ಆಸೆಯಾಗಿತ್ತು. ಆದರೆ ರಾಮ್ ಚರಣ್ ಗೆ ಮಗಳೆಂದರೆ ಪಂಚ ಪ್ರಾಣ. ಹಾಗಾಗಿ ರಾಮ್ ಚರಣ್ ಮತ್ತೊಂದು ಹೆಣ್ಣು ಮಗುವಿಗೆ ತಂದೆ ಆಗ್ತಾನೇನೋ ಎಂಬ ಭಯ ಇದೆ ಎಂದಿದ್ದರು.
ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಾರೀ ವಿವಾದಕ್ಕೆ ಕಾರಣವಾಗಿದೆ. ಒಬ್ಬ ಮೆಗಾಸ್ಟಾರ್ ಆಗಿ, ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಸ್ಥಾನದಲ್ಲಿ ನಿಂತುಕೊಂಡು ಈ ರೀತಿಯ ಹೇಳಿಕೆ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ನೀವೂ ನೀಡಿದಂತ ಹೇಳಿಕೆ ಭ್ರೂಣ ಹತ್ಯೆಗೆ ಬೆಂಬಲ ನೀಡಿದಂತೆ ಎಂದು ಚಿರಂಜೀವಿ ಅವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
![](https://suddione.com/content/uploads/2025/02/site.webp)