ಮೈಸೂರು: ಜನರ ಮನಸ್ಸು ಆತಂಕದಲ್ಲೇ ಒದ್ದಾಡುತ್ತಿದೆ. ಮತ್ತೆ ಲಾಕ್ಡೌನ್ ಮಾಡ್ತಾರಾ, ಮತ್ತೆ ಕೆಟ್ಟ ದಿನಗಳನ್ನ ನಾವೂ ನೋಡ್ಬೇಕಾ ಅಂತ. ಯಾಕಂದ್ರೆ ಕಳೆದ ಕೆಲ ದಿನಗಳಿಂದಿಚೆಗೆ ಇದ್ದಕ್ಕಿದ್ದ ಹಾಗೇ ಕೊರೊನಾ ಸೋಂಕಿತರ ಸಂಖ್ಯೆ ಅಂಖೆ ಶಂಕೆಯಿಲ್ಲದೆ ಅಷ್ಟು ದೊಡ್ಡಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದೀಗ ಈ ಬೆನ್ನಲ್ಲೇ ಓಂ ಶಕ್ತಿ ಯಾತ್ರಾರ್ಥಿಗಳನ್ನು ಯಾತ್ರೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಿಂದ ಓಂ ಶಕ್ತಿ ಯಾತ್ರೆ ಹೊರಟಿದ್ದ ಮಾಲಾಧಾರಿ ಮಹಿಳೆಯರಿಗೆ ಶ್ರೀರಂಗಪಟ್ಟಣದ ಟಿಎಚ್ಓ ಡಾ.ವೆಂಕಟೇಶ್ ಮನವಿ ಮಾಡಿಕೊಂಡಿದ್ದಾರೆ. ನಮಗೂ ದೇವರ ಮೇಲೆ ಭಕ್ತಿ ಇದೆ. ಕೊರೊನಾ ಇರೋ ಕಾರಣ ತಡೆಯುತ್ತಿದ್ದೇವೆ. ಇಲ್ಲ ಅಂದಿದ್ದರೆ ನಾವ್ಯಾರು ತಡೆಯುವ ಪ್ರಯತ್ನ ಮಾಡ್ತಾ ಇರಲಿಲ್ಲ ಎಂದಿದ್ದಾರೆ.
ಇನ್ನು ಇತ್ತೀಚೆಗಷ್ಟೇ ತಮಿಳುನಾಡಿಗೆ ಪ್ರವಾಸ ಕೈಗೊಂಡಿದ್ದ 30ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಿರುವ ಡಾ.ವೆಂಕಟೇಶ್, ಓಂ ಶಕ್ತಿ ಯಾತ್ರೆ ಹೋಗಿ ಬಂದವರಲ್ಲೇ ಕೊರೊನಾ ದೃಢವಾಗಿದೆ. ಈಗ ನೀವೂ ಹೋಗಿ ಬಂದ್ರೆ, ನಿಮ್ಮ ಮಕ್ಕಳು, ನಿಮ್ಮ ಊರಿನವರಿಗೆ ಸೋಂಕು ಹರಡುವಂತೆ ಆಗುತ್ತೆ ಎಂದಿದ್ದಾರೆ.