ಪುದುಚೇರಿ: ದೀಪಾವಳಿ ಹಭ ಎಲ್ಲೆಲ್ಲೂ ಮನೆ ಮಾಡಿದೆ. ಪಟಾಕಿ ಹೊಡೆಯೋದು, ದೀಪ ಹಚ್ಚಿ ಹಬ್ಬ ಆಚರಣೆ ಮಾಡುವುದು ಎಲ್ಲವೂ ನಡೆಯುತ್ತಿದೆ. ದೀಪಾವಳಿಯಂದು ದೀಪವನ್ನ ಹಚ್ಚಿ, ಭಕ್ತಿ ಪೂರ್ವಕವಾಗಿ ಹಬ್ಬ ಆಚರಣೆ ಮಾಡಿದರೆ ಹೆಚ್ಚು ಶ್ರೇಯಸ್ಸು.
ಆದ್ರೆ ದೀಪವಳಿ ಹಬ್ಬದಂದು ಪಟಾಕಿ ಹೊಡೆಯುವ ಸಂಪ್ರದಾಯವೂ ಜೊತೆ ಜೊತೆಯಲ್ಲೇ ನಡೆದುಕೊಂಡು ಬಂದಿದೆ. ಆದ್ರೆ ಪಟಾಕಿಯಿಂದ ಸಾಕಷ್ಟು ಅನಾಹುತಗಳು ನಡೆದಿದ್ದರು, ಪಟಾಕಿ ಹೊಡೆಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಪಟಾಕಿ ಹೊಡೆಯುವಾಗ ಎಚ್ಚರದಿಂದಿರಿ. ಆದಷ್ಟು ಸುರಕ್ಷತೆಯನ್ನ ವಹಿಸಿ, ಪಟಾಕಿಯನ್ನ ಹೊಡೆಯಿರಿ ಅಂತ ಎಲ್ಲರು ಸಲಹೆಗಳನ್ನ ಕೊಡ್ತಾರೆ. ಆದರೂ ಎಚ್ಚರ ವಹಿಸಬೇಕಾದವರು ವಹಿಸುವುದೆ ಇಲ್ಲ. ಇದೀಗ ಇಂಥ ದುರ್ಘಟನೆಗೆ ಅಪ್ಪ-ಮಗ ಇಬ್ಬರು ಬಲಿಯಾಗಿದ್ದಾರೆ.
ಪುದುಚೇರಿಯ ಅರಿಯನ್ ಕುಪ್ಪಮ್ ನಗರ ನಿವಾಸಿ ಕಲೈನೇಷನ್ ಹಾಗೂ 7 ವರ್ಷದ ಪುತ್ರ ಪ್ರದೀಶ್ ಬಲಿಯಾದವರು. ಪಟಾಕಿ ತುಂಬಿದ ಬಾಕ್ಸ್ ಗಳ ಚೀಲದ ಮೇಲೆ ಕಲೈನೇಷನ್ ಪ್ರದೀಶ್ ನನ್ನ ಕೂರಿಸಿಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ತಂದೆ ಮಗ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.