ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ : ನಾಲ್ವರು ಸಾವು, ಮೂವರಿಗೆ ಗಾಯ

1 Min Read

 

ಸುದ್ದಿಒನ್, ಚಿತ್ರದುರ್ಗ, (ಆ.13) : ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 50A ಮಲ್ಲಾಪುರ ಬಳಿ ಹೊಸ ಹೆದ್ದಾರಿ ಬಳಿ ಭಾನುವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ನಡೆದಿದೆ.

ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತರನ್ನು

1. ಭೀಮಾಶಂಕರ 26 ವರ್ಷ.
2. ಸಂಗನ ಬಸಪ್ಪ 36 ವರ್ಷ (ಕಾರು ಚಾಲಕ)                           3. ರೇಖಾ w/o ಸಂಗನ ಬಸಪ್ಪ 29 ವರ್ಷ.
4. ಅಗಸ್ತ್ಯ s/o ಸಂಗನ ಬಸಪ್ಪ 8 ವರ್ಷ

ಮತ್ತು ಗಾಯಗೊಂಡ ಮೂವರನ್ನು

1. ಅನ್ವಿತಾ  D/o ಸಂಗನ ಬಸಪ್ಪ 6 ವರ್ಷ.
2. ಆದರ್ಶ s/o ಸಂಗನ ಬಸಪ್ಪ 4 ವರ್ಷ.
3. ಅಪರಿಚಿತ ಪುರುಷ ವ್ಯಕ್ತಿ ವಯಸ್ಸು ಸುಮಾರು 26 ವರ್ಷಗಳು ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ಕೂಡಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಾಳುಗಳು ಸದ್ಯ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಬಿಜಾಪುರ ನಿವಾಸಿಗಳಾಗಿದ್ದು, ಸಂಗಣ್ಣ ಬಸಪ್ಪ ಮತ್ತು ಅವರ ಸಂಬಂಧಿ ಈರಣ್ಣ ಅವರ ಕುಟುಂಬ ಕುಟುಂಬ ಪ್ರವಾಸಕ್ಕಾಗಿ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಇನ್ನೊಂದು ಕಾರಿನಲ್ಲಿ ಈರಣ್ಣನವರ ಕುಟುಂಬವಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ ಅವರು ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *