ಸುದ್ದಿಒನ್, ಚಳ್ಳಕೆರೆ, (ಅ.19) : ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಈ ವರ್ಷ ಸಾಕಷ್ಟು ಬೆಳೆ ಹಾನಿಯಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇರುವ ಅಲ್ಪ,ಸ್ವಲ್ಪ ಬೆಳೆಯು ನೆಲಕಚ್ಚುವ ಸಂಭವವಿದೆ. ಅತಿವೃಷ್ಠಿ ಪ್ರದೇಶವೆಂದು ಘೋಷಿಸಿ, ಸೂಕ್ತ ಪರಿಹಾರ ನೀಡಲು ಶೇಂಗಾ ಬೆಳೆಗಾರರು ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಲ್ಲೂಕಿನ ತಳುಕು ಹೋಬಳಿ ಕಾಲುವೇಹಳ್ಳಿ ಗ್ರಾಮ ಪಂಚಾಯತಿಯ ಕ್ಯಾತಗೊಂಡನಹಳ್ಳಿ ಮತ್ತು ಯಾದಲಗಟ್ಟೆ ಗ್ರಾಮಗಳಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿರುವ ಶೇಂಗಾ ಬೆಳೆಯ ಸಮೀಕ್ಷೆಯನ್ನು ರೈತರ ಸಮ್ಮುಖದಲ್ಲಿ ಯುನಿವರ್ಸಲ್ ಸೋಂಪೋ ಜನರಲ್ ಇನ್ಶೂರೆನ್ಸ್ ಕಂಪನಿಯ ಜಿಲ್ಲಾ ಸಂಯೋಜನಾಧಿಕಾರಿ ಬಾಲರಾಜ್, ಸಹಾಯಕ ಕೃಷಿ ಅಧಿಕಾರಿ ಜೀವನ್, ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂಧರ್ಭದಲ್ಲಿ ಕಾಲುವೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೊಪ್ಪಿನ ಆರ್ ಪಾಲಯ್ಯ, ಯುನಿವರ್ಸಲ್ ಸೋಂಪೋ ಜನರಲ್ ಇನ್ಶೂರೆನ್ಸ್ ಕಂಪನಿ ಜಿಲ್ಲಾ ಸಂಯೋಜನಾಧಿಕಾರಿ ಬಾಲರಾಜ್ ಹಾಗೂ ಸಹಾಯಕ ಕೃಷಿ ಅಧಿಕಾರಿ ಜೀವನ್, ಗ್ರಾಮ ಲೆಕ್ಕಾಧಿಕಾರಿ ಸಿದ್ದೇಶ್ ಕೆ ಟಿ, ಗ್ರಾಮ ಪಂಚಾಯತಿ ಸದಸ್ಯರಾದ ಜಂಪಣ್ಣ, ಮುಕ್ಕಣ್ಣ, ತ್ರಿವೇಣಿ ರಾಮಕುಮಾರ್, ಗಂಗಮ್ಮ, ಗ್ರಾಮದ ಮುಖಂಡರಾದ ರವಿಕುಮಾರ್ ಓ, ಮಂಜುನಾಥ ಜಿ ಸಿ, ಪುಟಣ್ಣ, ಈರಣ್ಣ ಚಂದ್ರಣ್ಣ ಮೂರ್ತಪ್ಪ , ಇನ್ನು ಮುಂತಾದವರು ಇದ್ದರು.
