ಚಿತ್ರದುರ್ಗ,(ಜು 01) : ರೈತರಿಗೆ ವಂಚನೆ ಮಾಡುತ್ತಿರುವ ಖಾಸಗಿ ರೇಷ್ಮೆ ಮಂಡಿಗಳಾದ ಮೊಳಕಾಲ್ಮೂರು ತಾಲ್ಲೂಕು ಬಿ.ಜಿ.ಕೆರೆ ಮತ್ತು ಹಿರಿಯೂರು ತಾಲ್ಲೂಕ್ ಬೈಪಾಸ್ ಪಕ್ಕದಲ್ಲಿರುವ ಮಂಡಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿ ಇಂದು ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದರು.
ಮೊಳಕಾಲೂರು ತಾಲ್ಲೂಕು, ಬಿ.ಜಿ.ಕೆರೆ ಮತ್ತು ಹಿರಿಯೂರು ತಾಲ್ಲೂಕ್ ಬೈಪಾಸ್ ಪಕ್ಕ ತೆರೆದಿರುವ ಖಾಸಗಿ ರೇಷ್ಮೆ ಮಂಡಿಯಲ್ಲಿ ರೇಷ್ಮೆ ಬೆಳೆಗಾರರಿಗೆ ತೂಕ ದರ ನಿಗಧಿ ಸಾಗಾಣಿಕೆ ವೆಚ್ಚವನ್ನು ರೈತರ ಮೇಲೆ ಹಾಕಿ ಕಾನೂನು ವಿರೋಧಿ ಚಟುವಟಿಕೆ ಮಾಡುತ್ತಾ ರೈತರನ್ನು ಎಲ್ಲಾ ರೀತಿಯ ಮೋಸ, ವಂಚನೆ, ಮಾಡುತ್ತಿರುವ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಇಲ್ಲಿಯವರೆಗೆ ರೈತರಿಂದ ದೌರ್ಜನ್ಯವಾಗಿ ಹಣ ವಸೂಲಿ ಮಾಡಿರುವುದನ್ನು ಮಂಡಿ ಮಾಲೀಕರಿಂದ ವಸೂಲಿ ಮಾಡಬೇಕು ರೇಷ್ಮೆ ಮಂಡಿಯನ್ನು ಮುಚ್ಚಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು.
ಹಿರಿಯೂರು ತಾಲ್ಲೂಕ್ ಬೈಪಾಸ್ ಪಕ್ಕ ಬಿ.ಜಿ.ಕೆರೆ ರೇಷ್ಮೆ ಖಾಸಗಿ ಮಂಡಿಯಲ್ಲಿ 1 ಕ್ವಿಂಟಾಲ್ ಗೂಡಿಗೆ 2,500 ಕೆ.ಜಿ. ಗೂಡು ವಜಾ ತೆಗೆಯುವುದನ್ನು ನಿಲ್ಲಿಸಬೇಕು, 1 ಬಟಾರ್‍ಗೆ 450 ಗ್ರಾಂ ತೆಗೆಯುವುದನ್ನು ನಿಲ್ಲಿಸಬೇಕು. ರೈತರ ತಂದೆ ರೇಷ್ಮೆ ಗೂಡಿಗೆ ಸಾಗಾಣಿ ವೆಚ್ಚವೆಂದು ಪ್ರತಿ ಕೆ.ಜಿ.ಗೆ 5 ರೂ. ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಈ ಪದ್ಧತಿ ಅವೈಜ್ಞಾನಿಕವಾಗಿದೆ.
ರೈತರ ಹೊಲದಲ್ಲಿ ರೇಷ್ಮೆ ಖರೀದಿ ಮಾಡುವಾಗ ಬೆಲೆ ನಿಗಧಿಗೆ ಯಾವುದೇ ಮಾನದಂಡವಿಲ್ಲದೆ ಎಲ್ಲಾ ಗೂಡನ್ನು ಒಂದೇ ದರ ನಿಗಧಿ ಮಾಡುತ್ತಿರುವುದು ಕೂಡ ಅವೈಜ್ಞಾನಿವಾಗಿದ್ದು, ಒಳ್ಳೆ ಗೂಡಿಗೆ ಒಳ್ಳೆ ಬೆಲೆ ನಿಗಧಿ ಮಾಡಬೇಕು. ಗೂಡು ಪರೀಕ್ಷೆಗೆ ತಾಂತ್ರಿಕ ಯಂತ್ರಗಳಿಂದ ಪರಿಶೀಲಿಸಬೇಕು, ಬೇಕಾ ಬಿಟ್ಟಿಯಾಗಿ ದರ ನಿಗಧಿ ಮಾಡದೇ ಗೂಡಿಗೆ ತಕ್ಕಂತೆ ಬೆಲೆ ನಿಗಧಿ ಮಾಡಬೇಕು.
ರೇಷ್ಮೆ ಮಂಡಿಗೆ ತಂದಾಗ ರೇಷ್ಮೆ ಗೂಡು ತೂಕಕ್ಕೆ ಮತ್ತು ಅದಕ್ಕೆ ರಕ್ಷಣೆಗೆ ರೇಷ್ಮೆ ಮಾರುಕಟ್ಟೆ ಸರ್ಕಾರದ ಮಾದರಿಯಲ್ಲಿ ರಕ್ಷಣೆ ಒದಗಿಸಬೇಕು. ರೇಷ್ಮೆ ಮಂಡಿಯು ಎಲ್ಲಾ ಕಾನೂನು ಪಾಲಿಸಬೇಕು ರೇಷ್ಮೆ ಮಾರುಕಟ್ಟೆಗಳಲ್ಲಿ ತೆಗೆದುಕೊಳ್ಳುವ ರೀತಿಯಲ್ಲಿ (ರಾಮನಗರ) ರೈತರಿಗೆ ಪಟ್ಟಿ ಮಾಡಿ ಹಣ ಸಂದಾಯ ಮಾಡಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯು ವ್ಯಾಪಕವಾಗಿ ಹೆಚ್ಚಿಸುತ್ತಿದ್ದು, ಮಾರುಕಟ್ಟೆ ಸೌಲಭ್ಯವಿಲ್ಲದ ಕಾರಣ ಇವರು ಹಳೆಯ ರೇಷ್ಮೆ ಮಾರುಕಟ್ಟೆಯನ್ನು ಪುನಶ್ಚೇತನಗೊಳಿಸಬೇಕು.
ಮಂಡಿ ನಡೆಸುವವರು ಸರ್ಕಾರದಿಂದ ಅಥವಾ ಇಲಾಖೆಯಿಂದ ಯಾವುದೇ ರೀತಿಯ ಪರವಾನಿಗೆ ತೆಗೆದುಕೊಂಡಿಲ್ಲ. ರೇಷ್ಮೆ ಖಾಸಗಿ ಮಂಡಿ ತೆರೆದು ರೈತರಿಗೆ ಕೋಟ್ಯಾಂತರ ಪಂಗನಾಮ ಹಾಕುವ ಮಂಡಿಯಾಗಿರುತ್ತದೆ. ಸರ್ಕಾರಿ ಗೂಡು ಖರೀದಿಸುವಾಗ ಮಾರುಕಟ್ಟೆಗಳಲ್ಲಿ ಪಾಸ್‍ಬುಕ್ ರೈತರ ಇಲ್ಲದೆ ಖರೀದಿಸುವಂತಿಲ್ಲ. ಖಾಸಗೀ ಮಂಡಿಗಳಲ್ಲಿ ಟನ್‍ಗಟ್ಟಲೇ ಗೂಡು ಖರೀದಿಸಿದರೂ ಪಾಸ್‍ಬುಕ್ ಇಲ್ಲದೆ ಖರೀದಿಸುತ್ತಾರೆ. ಆಂಧ್ರಪ್ರದೇಶದ ಕಳ್ಳತನದ ರೇಷ್ಮೆಯನ್ನು ಸ್ಥಳೀಯ ರೈತರ ಬೇನಾಮಿ ಹೆಸರಿನಲ್ಲಿ ಖರೀದಿಸುತ್ತಾರೆ. ಈ ಎಲ್ಲಾ ಅಂಶಗಳನ್ನು ಪರಿಗಣನೆ ತೆಗೆದುಕೊಂಡು, ಖಾಸಗಿ ಮಂಡಿಗಳನ್ನು ಮುಚ್ಚಿಸಬೇಕೆಂದು ರೈತ ಸಂಘದ ವತಿಯಿಂದ ಒತ್ತಾಯಿಸಿದೆ.
ಪ್ರತಿಭನಟೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶೀ ನುಲೇನೂರು ಶಂಕ್ರಪ್ಪ, ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಹೊರಕೇರಪ್ಪ, ಮರ್ಲಹಳ್ಳಿ ರವಿಕುಮಾರ್, ಧನಂಜಯ, ಶಿವಕುಮಾರ್, ಲಕ್ಷ್ಮೀಕಾಂತ, ಚೇತನ, ಗೌಸಪೀರ್, ರೇಷ್ಮೇ ಬೆಳೆಗಾರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಮಂಜುನಾಥ್, ರಘುನಾಥ್ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.