ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ,(ಸೆ. 01) : ರೈತರ ಪಂಪ್‍ಸೆಟ್ ಮೋಟಾರುಗಳಿಗೆ ಸಮರ್ಪಕ ವಿದ್ಯುತ್ ನೀಡದೆ ಇರುವ ಬೆಸ್ಕಾಂ ಇಲಾಖೆ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣದಿಂದ ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, ಮಳೆಬಾರದೆ ರೈತರ ಕಂಗಾಲಾಗಿದ್ದಾರೆ. ಈರುಳ್ಳಿ ಮೆಕ್ಕೆಜೋಳ, ಹತ್ತಿ, ಹೂವು ಹಣ್ಣುಗಳು, ತರಕಾರಿ ಇನ್ನು ಮುಂತಾದ ಬೆಳೆಗಳು ಬಿಸಿಲಿನ ತಾಪಮಾನ ಹೆಚ್ಚಾಗಿ ಸಂಪೂರ್ಣ ಬಾಡಿ ಸೊರಗಿ ನುಸಿರೋಗ ಬೀಳುವ ಹಂತಕ್ಕೆ ತಲುಪಿವೆ.
ಒಂದು ಕಡೆ ಅಂರ್ತಜಲ ಕುಸಿಯುತ್ತಿದೆ.ಇಂಥ ಸಂದರ್ಭದಲ್ಲಿಯೂ ಪಂಪ್‍ಸೆಟ್‍ಗಳನ್ನು ನಂಬಿಕೊಂಡಿರುವಂತ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆ ಅಧಿಕಾರಿಗಳು ಪಂಪ್‍ಸೆಟ್‍ಗಳಿಗೆ ಒಂದು ದಿನದೊಳಗೆ 7 ಗಂಟೆ ಕೊಡಬೇಕಿದ್ದ ಕರೆಂಟನ್ನು ರಾತ್ರಿ 2.30 ನಿಮಿಷಕ್ಕೆ 21/2 ಗಂಟೆ ಹಗಲು ಹೊತ್ತು 41/2 ಗಂಟೆ ದಿನಕ್ಕೆ ಕೊಡಬೇಕಿದ್ದ ಕರೆಂಟನ್ನು ರಾತ್ರಿ ಹೊತ್ತಲ್ಲಿ 2 ಗಂಟೆ ಹಗಲು ಹೊತ್ತಲ್ಲಿ 2 ಗಂಟೆ ವಿದ್ಯುತ್‍ನ್ನು ನೀಡುತ್ತಾರೆ. ಅದರ ಮಧ್ಯೆ ಸುಮಾರು ಸಲ ವಿದ್ಯುತ್‍ನ್ನು ತೆಗೆದುಕೊಡುತ್ತಾರೆ. ಇನ್ನು 3 ಗಂಟೆ ಕರೆಂಟನ್ನು ಕೇಳಿದರೆ ಲೋಡ್‍ಸೆಂಡ್ಡಿಂಗ್ ಮಾಡಿದ್ದಾರೆ.
ಬೆಂಗಳೂರಿನಿಂದ ಮಾಹಿತಿ ಬಂದಿದೆಯೆಂದು ಸಬೂಬು ಹೇಳಿಕೊಂಡು ಸುಮಾರು 15 ದಿನಗಳಿಂದ ಕರೆಂಟ್ ನೀಡದೆ ಸತಾಯಿಸುತ್ತಿದ್ದಾರೆ. ಪಂಪ್‍ಸೆಟ್‍ಗಳಿಗೆ ಗುಣಮಟ್ಟದ ವಿದ್ಯುತ್ ನೀಡದೆ ಇರುವ ಕಾರಣ ಪಂಪ್‍ಸೆಟ್ ಮೋಟಾರ್ ಗಳು ಸುಟ್ಟುಹೋಗಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ವಿದ್ಯುತ್‍ನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣದಿಂದ ಒತ್ತಾಯಿಸಲಾಯಿತು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮೀಕಾಂತ್ ಲಿಂಗಾವರಹಟ್ಟಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರು, ಶಿವಮೂರ್ತಿ ಜಿಲ್ಲಾ ಉಪಾಧ್ಯಕ್ಷ ಜಿ.ಬಿ.ಪಾಪಣ್ಣ ತಾಲ್ಲೂಕು ಉಪಾಧ್ಯಕ್ಷ ಶ್ರೀಧರ್‍ರೆಡ್ಡಿ ದೊಗ್ಗಲ್ ಘಟಕ ಅಧ್ಯಕ್ಷ ಅಂಜಿನಪ್ಪ ಕಾಸವರಹಟ್ಟಿ ರಾಜೇಂದ್ರರೆಡ್ಡಿ ಕಾಸವರಹಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.