ಬೆಳಗಾವಿ: ಜಿಲ್ಲೆಗೆ ಭೇಟಿ ನೀಡಿ, ಸಂಗೊಳ್ಳಿರಾಯಣ್ ಅವರ ಬಗ್ಗೆ ಜಿಲ್ಲೆಯ ಜನತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ನೀವೆಷ್ಟು ಜನ ಸಂಗೊಳ್ಳಿ ಹೋಗಿದ್ರಿ ಅಂತ ಗೊತ್ತಿಲ್ಲ. ಹೋಗಿದ್ದೀರಾ ಯಾರಾದ್ರು..? ಎಷ್ಟು ಜನ ಹೋಗಿದ್ರಿ ಕೈ ಎತ್ತಿ ನೋಡೋಣಾ..? ಅಲ್ಲಿ ಏನು ನಡೀತಾ ಇದೆ ಹೇಳಿ ನೋಡೋಣಾ..? ಎಂದು ನೆರೆದಿದ್ದವರನ್ನು ಕೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಾನು ನೂರು ಎಕರೆ ಜಮೀನು ಕೊಟ್ಟು ಸಂಗೊಳ್ಳಿ ರಾಯಣ್ಣ ಅವರ ಹೆಸರಲ್ಲಿ ಸೈನಿಕ ಶಾಲೆ ಮಾಡುವುದಕ್ಕೆ, ರಾಕ್ ಗಾರ್ಡನ್ ಮಾಡುವುದಕ್ಕೆ, ಮ್ಯೂಸಿಯಂ ಮಾಡುವುದಕ್ಕೆ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿ, ಅಭಿವಪಡಿಸಿ, ಅದೊಂದು ಟೂರಿಸಂ ಸೆಂಟರ್ ಆಗ್ಬೇಕು ಅಂತ ಆ ಯೋಜನೆ ಮಾಡಿ ನಾನೇ ಶಂಕು ಸ್ಥಾಪನೆ ಮಾಡಿ ಬಂದೆ. ಅದು ಕೆಲಸ ನಡೆಯುತ್ತಾ ಇದೆ.
ಅದು ಒಂದು ಪ್ರವಾಸೋದ್ಯಮ ಕೇಂದ್ರವಾಗಬೇಕು, ಎಲ್ಲರು ಹೋಗಿ ನೋಡಬೇಕು. ಸಂಗೊಳ್ಳಿರಾಯಣ್ಣ ಅವರು ಹುಟ್ಟಿದಾಗಿನಿಂದ ಅವರನ್ನು ನೇಣು ಹಾಕಿದ್ರಲ್ಲ ಅಲ್ಲಿವರೆಗೂ ಅವರ ಬದುಕು ಇರುತ್ತದೆ. ಅವರ ಸಾಧನೆ ಇರುತ್ತದೆ. ನೀವೆಲ್ಲಾ ಸಂಗೊಳ್ಳಿಗೆ ಹೋಗಿ ನೋಡಬೇಕು. ಸಂಗೊಳ್ಳಿ ಇರುವುದು ಬೈಲವಂಗಲ, ಅವರನ್ನು ನೇಣು ಹಾಕಿದ ಜಾಗ ಇರುವುದು ಖಾನಾಪುರ. ಸಂಗೊಳ್ಳಿ ರಾಯಣ್ಣ ಅವರಿಂದ ದೇಶಭಕ್ತಿ, ದೇಶಪ್ರೆಮ, ದೇಶಕ್ಕೋಸ್ಕರ ಮುಡಿಪಾಗಿಡುವಂತ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಇರಬಹುದು, ಬಸವರಾಜ್ ಬೊಮ್ಮಾಯಿ ಇರಬಹುದು, ಜಗದೀಶ್ ಶೆಟ್ಟರ್ ಇರಬಹುದು, ಸದಾನಂದ ಗೌಡ ಇರಬಹುದು ಒಂದು ರೂಪಾಯಿ ಮನ್ನಾ ಮಾಡಿರುವುದನ್ನು ತೋರಿಸಲಿ ನೋಡೋಣಾ. ನಾನು ಐದು ವರ್ಷದಲ್ಲಿ ಬರೀ ನೇಕಾರರ ಸಾಲ ಮನ್ನಾ ಮಾಡಲಿಲ್ಲ. ಎಲ್ಲಾ ರೈತರ ಸಾಲ ಐವತ್ತು ಸಾವಿರ ರೂಪಾಯಿವರೆಗೆ ಸಂಪೂರ್ಣ ಮನ್ನ ಮಾಡುವಂತೆ ಮಾಡಿದ್ದೆ ಎಂದಿದ್ದಾರೆ.