Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಳೆ ನಾಶದಿಂದ ಮೂವರು ರೈತರ ಆತ್ಮಹತ್ಯೆ..!

Facebook
Twitter
Telegram
WhatsApp

ರಾಯಚೂರು : ನಿರಂತರ ಅಕಾಲಿಕ ಮಳೆಯಿಂದಾಗಿ ರೈತರು ಸಾಕಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯೆಲ್ಲಾ ಸಂಪೂರ್ಣವಾಗಿ ನಾಶವಾಗಿದೆ. ನೂರಾರು ಎಕರೆ ಬೆಳೆನಾಶವಾಗಿದೆ. ಇದರಿಂದ ಮನನೊಂದು ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ತಾ.ಬೋಗಾಪುರ ಗ್ರಾಮದ ರೈತ ವೀರನಗೌಡ ಪಾಟೀಲ್ ( 55) , ಲಿಂಗಸೂಗೂರು ತಾ. ತುರಡಗಿ ಗ್ರಾಮದ ರೈತ ಸಿದ್ದಪ್ಪ (55), ಭತ್ತದ ಬೆಳೆಹಾಳಾಗಿದ್ದಕ್ಕೆ ಸಿಂಧನೂರು ತಾ. ರೌಂಡಗುಂದಾ ಗ್ರಾಮದ ರೈತ ರಂಗಣ್ಣ(30) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂವರು ರೈತರ ಆತ್ಮಹತ್ಯೆ ಪ್ರಕರಣ ಸಂಬಂಧ ರಾಯಚೂರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿಕೆ ನೀಡಿದ್ದು, ಮೂವರು ರೈತರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಕಾಲಿಕ ‌ಮಳೆಯಾದ ಬಳಿಕ ಒಂದು ರೈತ ಆತ್ಮಹತ್ಯೆ ಎಂಬ ಕೇಸ್ ಆಗಿಲ್ಲ. ರೈತ ಆತ್ಮಹತ್ಯೆ ಎಂದು ಪರಿಗಣಿಸಲು, ರೈತರು ಇರಬೇಕು,ರೈತರಿಗೆ ಸಾಲ ಇರಬೇಕು, ಬ್ಯಾಂಕ್ ನಿಂದ ನೋಟೀಸ್ ಬರಬೇಕು. ಈ ಮೂರು ಅಂಶಗಳು ಇರುವರು ಒಬ್ಬರು ರೈತರು ಇಲ್ಲ. ಮೃತರು ಬಗ್ಗೆ ಎಫ್ ಐಆರ್ ನಲ್ಲಿ ರೈತರ ಆತ್ಮಹತ್ಯೆವೆಂದು ಫೈಲ್ ಆಗಿದೆ. ಮೃತರಾದವರು ರೈತರಾಗಿದ್ದಾರೆ. ಅವರಿಗೆ ಸಾಲ ಕೂಡ ಇದೆ. ಆದ್ರೆ ಸಾಲ ಪಾವತಿ ಮಾಡಿ ಎಂದು ಒತ್ತಡ ಹಾಕಿಲ್ಲ.

ಬ್ಯಾಂಕ್ ನಿಂದ ಒತ್ತಡ ಬಂದಿರಬೇಕು ‌ಅಂದಾಗ ಅದು ರೈತ ಆತ್ಮಹತ್ಯೆ ಆಗುತ್ತೆ. ಪೊಲೀಸರ ಮಾಹಿತಿ ಆಧರಿಸಿ ನಾವು ತನಿಖೆ ನಡೆಸಿದ್ದೇವೆ. ನಮ್ಮ ‌ಜಿಲ್ಲೆಯಲ್ಲಿ ಯಾವುದೇ ಆತ್ಮಹತ್ಯೆ ಆಗಿಲ್ಲ ಮೃತರು ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಗೆ ಶರಣಾಗಿರಬಹುದು. ಮಾನವೀಯತೆ ದೃಷ್ಟಿಯಿಂದ ನೋಡಿದ್ರೂ ಸಹ ರೈತ ಆತ್ಮಹತ್ಯೆ ಎಂದು ಹೇಳಲು ಆಗಲ್ಲ. ನಿಯಮ ಪ್ರಕಾರ ‌ನೋಡಿದ್ರೂ ಸಹ ರೈತ ಆತ್ಮಹತ್ಯೆ ಎಂದು ಪರಿಗಣಿಸಲು ಆಗಲ್ಲವೆಂದಿದ್ದಾರೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ‌ರಾಜೇಂದ್ರನ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಮತ್ತೊಮ್ಮೆ ಅಧಿಕಾರಕ್ಕೆ…!

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ದೊಡ್ಡ ಅಬ್ಬರವನ್ನೇ ಸೃಷ್ಟಿಸಿದೆ. ದ್ವಿಶತಕದ ಸೀಟುಗಳನ್ನು ದಾಟಿ ದಾಖಲೆ ಸೃಷ್ಟಿಸಿದ್ದಾರೆ. ಮಹಾಯುತಿ ಈಗಾಗಲೇ 220 ಸ್ಥಾನಗಳಲ್ಲಿ ಮುನ್ನಡೆಯಲ್ಲಿ ಮುಂದುವರಿದಿದೆ. ಏತನ್ಮಧ್ಯೆ, ಮಹಾವಿಕಾಸ್ ಅಘಾಡಿ 53 ಸ್ಥಾನಗಳಲ್ಲಿ ಮುನ್ನಡೆ

error: Content is protected !!