in ,

ಸಿರಿಧಾನ್ಯಗಳಿಂದ ರೈತ ಹಾಗೂ ಗ್ರಾಹಕರಿಗೆ ಅನುಕೂಲ :  ಸುಜಯ್

suddione whatsapp group join

ಚಿತ್ರದುರ್ಗ, (ಮೇ.24) :  ಸಿರಿಧಾನ್ಯವನ್ನು ಬೆಳೆಯುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಸಿರಿಧಾನ್ಯ ಮಿಲ್‍ನ್ನು ಪ್ರಾರಂಭ ಮಾಡಲಾಗಿದ್ದು ಇದರಿಂದ ರೈತ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು  ಶ್ರೀ ಸರಸ್ವತಿ ಸಿರಿಧಾನ್ಯ ಮಿಲ್‍ನ ಮಾಲಿಕರಾದ  ಸುಜಯ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸಿರಿಧಾನ್ಯದ ತವರೂರಾಗಿದೆ ಇಲ್ಲಿ ಹೆಚ್ಚಳವಾಗಿ ಸಿರಿಧಾನ್ಯವನ್ನು ಬೆಳೆಯಲಾಗುತ್ತಿದೆ. ಆದರೆ ಅದರ ಮಾರುಕಟ್ಟೆ ಇಲ್ಲವಾಗಿದೆ ಇದನ್ನು ಮನಗಂಡು 2016ರಲ್ಲಿ ಸಿರಿಧಾನ್ಯ ಮಳಿಗೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭ ಮಾಡಲಾಯಿತು.
ತದ ನಂತರ ಜನತೆ ಸಿರಿಧಾನ್ಯವನ್ನು ಬಳಸಲು ಪ್ರಾರಂಭ ಮಾಡಲಾರಂಭಿಸಿದರು.

ಇದರಿಂದ ನಾವು ಸಹಾ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯವನ್ನು ಖರೀದಿ ಮಾಡಿ ಗ್ರಾಹಕರಿಗೆ ನೀಡಲಾರಂಭಿಸಲಾಯಿತು ಎಂದರು.

ಸಿರಿಧಾನ್ಯವನ್ನು ಮಾತ್ರವೇ ಮಾರಾಟ ಮಾಡದೇ ಅದರ ಉತ್ಪನ್ನಗಳನ್ನು ಸಹಾ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಸಿರಿಧಾನ್ಯ ಮಿಲ್‍ನ್ನು ಮೇ. 25 ರಂದು ಪ್ರಾರಂಭ ಮಾಡಲಾಗುತ್ತಿದೆ. ಇಲ್ಲಿ ಸಿರಿಧಾನ್ಯಗಳ ಜೊತೆಯಲ್ಲಿ ಅದರ ಉಪ ಉತ್ಪನ್ನಗಳನ್ನು ನಾವೇ ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ. ವಿವಿಧ ಸಿರಿಧಾನ್ಯಗಳಿಂದ ರೂಟ್ಟಿ, ನಿಪ್ಪಟ್ಟು, ಗಾಣದಿಂದ ತಯಾರು ಮಾಡಲಾದ ಸೇಂಗಾ, ಎಳ್ಳು, ಹರಳೆಣ್ಣೆಯನ್ನು ಮಾರಾಟ ಮಾಡಲಾಗುತ್ತದೆ. ಇದರ ಉಪಯೋಗದಿಂದ ದೇಹದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಸಜಯ್ ತಿಳಿಸಿದರು.

ಪ್ರಾರಂಭದ ಅಂಗವಾಗಿ ಮಿಲೆಟ್ ಕಿಟ್‍ನ್ನು 700 ರೂಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ಕುಟುಂಬಕ್ಕೆ ಬೇಕಾಗುವ ಸಿರಿಧಾನ್ಯ, ಗಾಣದ ಎಣ್ಣೆ, ಸಾವಯವ ದಿನಸಿ ಸೇರಿರುತ್ತದೆ, ಇದಲ್ಲದೆ ಕೆಮಿಕಲ್ ರಹಿತ ಸೌಂದರ್ಯ ವರ್ಧಕಗಳ ದೂರೆಯುತ್ತವೆ. ಪ್ರತಿಯೊಂದು ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತದೆ.

ಇದರೊಂದಿಗೆ ಸಿರಿಧಾನ್ಯ ಆಹಾರ ತಯಾರಿಯ ಬಗ್ಗೆ ನೇರ ಹಾಗೂ ಪೋನ್ ಕರೆ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ. ಇದರಲ್ಲಿ ಅಧಿಕ ನಾರಿನಂಶ ಮತ್ತು ಪೋಷಕಾಂಶಗಳಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಖಾಯಿಲೆಗಳು ಬಾರದಂತೆ ತಡೆಯುತ್ತವೆ ಎಂದರು.

ಮೇ.25ರ ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಸ್ವದೇಶಿ ಜಾಗರಣ್ ಮಂಚ್‍ನ ಕ್ಷೇತ್ರ ಸಂಘಟಕರಾದ ಜಗದೀಶ್‍ಜೀ ನೇರವೇರಿಸಲಿದ್ದಾರೆ.
ಗೋಷ್ಟಿಯಲ್ಲಿ ಪ್ರಣವ್ ಕುಮಾರ್ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಶರವಣರನ್ನು ಮತ್ತೆ ಆಯ್ಕೆ ಮಾಡಿದ್ದು ಯಾಕೆ ಗೊತ್ತಾ..? : ಕುಮಾರಸ್ವಾಮಿ ಹೇಳಿದ್ದೇನು..?

ಕಾರ್ಮಿಕರು ಆರೋಗ್ಯ ತಪಾಸಣೆಯ ಸದುಪಯೋಗ ಪಡೆಯಿರಿ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ