ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಗತಿಪರ ರೈತ ಕೆ. ಜ್ಞಾನೇಶ್ವರ ಅವರಿಂದ ಧ್ವಜಾರೋಹಣ

1 Min Read

ಚಿತ್ರದುರ್ಗ, (ಆ.15) :  ಬಾಪೂಜಿ ವಿದ್ಯಾಸಂಸ್ಥೆಯಲ್ಲಿ 75 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರಗತಿಪರ ರೈತರಾದ ಕೆ. ಜ್ಞಾನೇಶ್ವರ ಅವರನ್ನು ಆಹ್ವಾನಿಸಲಾಗಿತ್ತು. ಧ್ವಜಾರೋಹಣ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಗಳಾದ ಕೆ.ಎಂ.ವೀರೇಶ್,  ನಿರ್ದೇಶಕರಾದ ಶ್ರೀ ಕೆ ಎಂ ಚೇತನ್ ಹಾಗೂ ಮುಖ್ಯ ಅತಿಥಿಗಳಾದ ಕೆ. ಜ್ಞಾನೇಶ್ವರ್ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜ್ಞಾನೇಶ್ವರ್ ಇದೇ ಮೊದಲ ಬಾರಿಗೆ ಅನಿಸುತ್ತದೆ. ರೈತರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸ್ವಾಗತಿಸಿ ಧ್ವಜಾರೋಹಣ ನೆರವೇರಿಸಿರುವುದು ಎಂದು ಹೇಳಿದರು. ಹಾಗೆಯೇ ರೈತ ಕಷ್ಟಪಟ್ಟು ದುಡಿದರೆ ಮಾತ್ರ ನಾವೆಲ್ಲರು ಹೊಟ್ಟೆ ತುಂಬಾ ಊಟ ಮಾಡಬಹುದು. ಆದರೆ ರೈತರನ್ನು ಗುರುತಿಸುವ , ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಇರಬೇಕು. ಮಕ್ಕಳು ಪ್ರತಿವಾರ ಹೊರಗಡೆ ಸುತ್ತಾಡಲು ಬೇರೆ ಎಲ್ಲೋ ಹೋಗುವ ಬದಲು ರೈತರ ಹೊಲಗದ್ದೆಗಳಿಗೆ ಭೇಟಿ ಹೊಸ ಅನುಭವವನ್ನು ಪಡೆಯಿರಿ ಎನ್ನುವ ಕಿವಿಮಾತನ್ನು ಹೇಳಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಗಳಾದ ಕೆ ಎಂ. ವೀರೇಶ್ ರವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು , ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಶಿಕ್ಷಕರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *