ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಒಂದು ತಿಂಗಳು ಕಳೆದಿದೆ. ಆದ್ರೆ ಪ್ರತಿಕ್ಷಣವೂ ಅವರನ್ನು ನೆನೆಸಿಕೊಂಡಾಗ ಕಠಿಣ ಎನಿಸುತ್ತದೆ. ಏನು ಮಾಡಲು ಸಾಧ್ಯ ಅದೆಲ್ಲೆವನ್ನು ಒಪ್ಪಲೇಬೇಕಲ್ಲವೆ. ಆದ್ರೆ ಅತ್ಯಂತ ನೋವಿನ ಸಂಗತಿಯೆಂದರೆ ಇಂದು ಅಪ್ಪು ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ.

ಅಶ್ವಿನಿ ಹಾಗೂ ಪುನೀತ್ ರಾಜ್‍ಕುಮಾರ್ ವಿವಾಹ ಬಂಧನಕ್ಕೆ ಇಂದಿಗೆ 22 ವಸಂತಗಳು ತುಂಬಿವೆ. 21 ವರ್ಷಗಳ ಕಾಲ ತಮ್ಮ ವಾರ್ಷಿಕೋತ್ಸವವನ್ನ ಗಂಡ ಹೆಂಡತಿ ಒಟ್ಟಿಗೆ ಆಚರಿಸಿಕೊಳ್ಳುತ್ತಿದ್ದರು. ಅಪ್ಪು ಅವರು ಕೂಡ ಹೆಂಡತಿಗಾಗಿ ಗಿಫ್ಟ್ ಕೊಡ್ತಾ ಇದ್ರು. ಆದ್ರೆ ಇಂದು ಅವರಿಲ್ಲದೆ ಅಶ್ವಿನಿ ಒಬ್ಬಂಟಿಯಾಗಿದ್ದಾರೆ. ವಾರ್ಷಿಕೋತ್ಸವದ ಕಳೆ ಮಂಕಾಗಿದೆ. ಫೋಟೋಗೆ ಪೂಜೆ ಮಾಡಿ, ಮನಸ್ಸಲ್ಲೇ ನೋವು ತಿಂದಿದ್ದಾರೆ.

ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರದ್ದು ಲವ್ ಮ್ಯಾರೇಜ್. ಚಿಕ್ಕಮಗಳೂರಿನ ಅಶ್ವಿನಿ ಅವರು ಸ್ನೇಹಿತರಿಂದ ಪರಿಚಯವಾಗಿದ್ದರು. ಆ ಸ್ನೇಹ ನಂತರ ಪ್ರೀತಿಗೆ ತಿರುಗಿ ಆ ಬಳಿಕ ಮನೆಯವರ ಒಪ್ಪಿಗೆ ಮೇರೆ ಇಬ್ಬರು ಮದುವೆಯಾಗಿದ್ದರು. 22 ವರ್ಷಗಳ ಸುಧೀರ್ಘ ಪಯಣದಲ್ಲಿ ಅಪ್ಪು ಅಶ್ವಿನಿ ಅವರ ಜೊತೆಗೆ ಖುಷಿಖುಷಿಯಾಗಿ ಜೀವನ ನಡೆಸಿದ್ದರು. ವಿಧಿ ಈ ಬಾರಿಯ ವಾರ್ಷಿಕೋತ್ಸವಕ್ಕೂ ಮುನ್ನವೇ ಕರೆದುಕೊಂಡು ಬಿಟ್ಟಿದೆ. ಅಪ್ಪು ಮೇಲಿನ ಅಗಾಧ ಪ್ರೀತಿಯನ್ನ ಹೊತ್ತು, ಅವರಿಲ್ಲದ ನೋವಿನಲ್ಲೇ, ಮಕ್ಕಳ ಭವಿಷ್ಯಕ್ಕಾಗಿ ಗಟ್ಟಿಯಾಗಿ ನಿಂತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.
ಜೊತೆಗಿರದ ಜೀವ ಹಿಂದಿಗಿಂತ ಜೀವಂತ ಅನ್ನೋ ‘ಪರಮಾತ್ಮ’ನ ಮಾತಿನಂತೆ ಅಪ್ಪು ಎಲ್ಲೆ ಮನಸ್ಸಲ್ಲೂ ಯಾವಾಗಲೂ ಜೀವಂತವಾಗಿರುತ್ತಾರೆ. ಅವರಿಲ್ಲದೆ ಹೋದರು ಅವರಿಬ್ಬರ ವಾರ್ಷಿಕೋತ್ಸವ ಅಶ್ವಿನಿ ಅವರ ಮನದಲ್ಲಿ ಕೊಂಚವಾದ್ರೂ ನಗು ಮೂಡುವಂತಾಗಲಿ.

