Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಹುಟ್ಟುಹಬ್ಬಕ್ಕೆ ವಾರಗಳ ಮೊದಲೇ ಮನೆ ಮುಂದೆ ಕ್ಯೂ ನಿಂತ ಅಭಿಮಾನಿಗಳು..!

---Advertisement---

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆನೇ ಕ್ರೇಜ್. ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿರುವ ನಟ. ದರ್ಶನ್ ಅವರ ಹುಟ್ಟುಹಬ್ಬ ಬಂತು ಅಂದ್ರೆ ಸಾಕು, ಅಭಿಮಾನಿಗಳು ಅವರ ಮನೆ ಮುಂದೆ ಕ್ಯೂ ನಿಂತಿರುತ್ತಾರೆ. ತಿಂಗಳಿಗೆ ಮುನ್ನವೇ ಸೆಲೆಬ್ರೇಷನ್ ವೆ ಪ್ರಿಪರೇಷನ್ ಮಾಡಿಕೊಳ್ಳುತ್ತಾರೆ. ಇದೀಗ ಮತ್ತೆ ಹುಟ್ಟುಹಬ್ಬದ ಸಂಭ್ರಮ ಹತ್ತಿರವಿದೆ.

ಮಾಮೂಲಿಯಂತೆ ದರ್ಶನ್, ತನ್ನ ಸೆಲೆಬ್ರೆಟಿಗಳ ಬಳಿ ಹುಟ್ಟುಹಬ್ಬವನ್ನು ಸಾರ್ಥಕವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಕೇಕು, ಹಾರ ಎಂದು ಹಣ ವ್ಯರ್ಥ ಮಾಡುವ ಬದಲು, ಸಾರ್ಥಕವಾಗುವಂತ ಕೆಲಸ ಮಾಡಲು ತಿಳಿಸಿದ್ದಾರೆ. ಅದೇ ಹಣಕ್ಕೆ ದವಸ ಧಾನ್ಯಗಳನ್ನು ತರಲು ಸೂಚನೆ ನೀಡಿದ್ದಾರೆ. ಫೆಬ್ರವರಿ 16ಕ್ಕೆ ಹುಟ್ಟುಹಬ್ಬವಿದೆ. ಆದರೆ ವಾರವಿರುವಾಗಲೇ ದರ್ಶನ್ ಅವರ ಹುಟ್ಟುಹಬ್ಬ ಶುರುವಾಗಿದೆ.

ದರ್ಶನ್ ಅವರ ಮನೆ ಮುಂದೆ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ದರ್ಶನ್ ಅವು ಮೊದಲೇ ಹೇಳಿದಂತೆ ದವಸ-ಧಾನ್ಯಗಳನ್ನು ತಂದುಕೊಡುವ ಕೆಲಸಗಳು ನಡೆಯುತ್ತಿವೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ನಿವಾಸ ಬಳಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಬೆಳಗ್ಗೆಯಿಂದಾನೇ ಫ್ಯಾನ್ಸ್ ನಟನನ್ನು ನೋಡಲು ಕಾಯುತ್ತಿದ್ದಾರೆ.

 

ಫೆಬ್ರವರಿ 16ಕ್ಕೆ ದರ್ಶನ್ ಅವರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ತಮ್ಮ ಸೆಲೆಬ್ರೆಟಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಫ್ಯಾನ್ಸ್ ಕೂಡ ಅಂದಿನ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಕಾಮನ್ ಡಿಪಿ ರಿಲೀಸ್ ಸಿದ್ಧ ಮಾಡಿದ್ದಾರೆ. ಅಂದು ದರ್ಶನ್ ಅವರ ಡೆವಿಲ್ ಸಿನಿಮಾದ ಅಪ್ಡೇಟ್ ಕೂಡ ಸಿಗಬಹುದು ಎಂಬ ನಿರೀಕ್ಷೆ ಇದೆ. ಕಾಟೇರ ಸಕ್ಸಸ್ ನಡುವೆ ಯಾವೆಲ್ಲಾ ಶುಭ ಸುದ್ದಿ ಕೊಡಬಹುದು ಎಂಬ ಕಾತುರತೆ ಫ್ಯಾನ್ಸ್ ಗಳಲ್ಲಿ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...