Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಲಾರ್ ಟೀಸರ್ ಅಭಿಮಾನಿಗಳು ಫಿದಾ.. ಗಂಟೆ ಗಂಟೆಗೂ ಮಿಲಿಯನ್ ವೀವ್ಸ್

---Advertisement---

 

ಬಹುನಿರೀಕ್ಷಿತ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಬೆಳಗಿನ ಜಾವದಲ್ಲಿಯೇ ಟೀಸರ್ ರಿಲೀಸ್ ಮಾಡಲಾಗಿದೆ. ಇವತ್ತು ಪ್ರಶಾಂತ್ ನೀಲ್ ಫ್ಯಾನ್ಸ್, ಪ್ರಭಾಸ್ ಫ್ಯಾನ್ಸ್ ಬೆಳ್್ಗೆ ಎದ್ದ ಕೂಡಲೇ ಮೊಬೈಲ್ ಹಿಡಿದು ಕೂತಿದಿದ್ದಾರೆ. ಸಲಾರ್ ಟೀಸರ್ ನೋಡಿದ್ದಾರೆ.

ಟೀಸರ್ ರಿಲೀಸ್ ಆದ ಬಳಿಕ ಯೂಟ್ಯೂಬ್ ನಲ್ಲಿ ಗಂಟೆ ಗಂಟೆಗೂ ವೀವ್ಸ್ ಹೆಚ್ಚಾಗುತ್ತಿದೆ. ನೋಡುಗರ ಖುಷಿ ಜೋರಾಗಿದೆ. ಮಿಲಿಯನ್ ಗಟ್ಟಲೇ ವೀವ್ಸ್ ಬಂದಿದೆ. ಡಾರ್ಲಿಂಗ್ ಪ್ರಭಾಸ್ ಮಾಸ್ ಲುಕ್ಕಿಗೆ ಕುಂತಲ್ಲಿಯೇ ಶಿಳ್ಳೆ ಚಪ್ಪಾಳೆಗಳು ಸುರಿದಿದೆ. ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಟೀಸರ್ ಕತ್ತಲಲ್ಲಿಯೇ ಕಾಣಿಸುತ್ತದೆ. ಮೊದಲಿಗೆ ಎಲ್ಲರೂ ಕಿರುಚುತ್ತಾರೆ. ವೃದ್ಧನೊಬ್ಬ ಇಂಟ್ರೂಡಕ್ಷನ್ ಕೊಡ್ತಾ ಇದ್ರೆ ಎದೆಗೆ ಗನ್ ಹಿಡಿದವ ಎದೆ ಗಢ ಗಢ ಅಂತ ನಡುಗಿ ಗನ್ ಕೆಳಗೆ ಬೀಳುತ್ತೆ. ಅಲ್ಲಿಗೆ ಹೀರೋ ಎಂಟ್ರಿಯಾಗುತ್ತೆ. ರಕ್ತ ಅಂಟಿದ ಮುಷ್ಠಿ ತೋರಿಸುತ್ತಾ ಪ್ರಭಾಸ್ ಲುಕ್ ರಿವೀಲ್ ಮಾಡಲಾಗಿದೆ. 1 ನಿಮಿಷ 46 ಸೆಕೆಂಡ್ ಇರುವ ಈ ಟೀಸರ್ ಗೆ ಮಂದಿ ಉಘೇ ಉಘೆ ಎಂದಿದ್ದಾರೆ. ಬಿಜಿಎಂ ಗಂತು ಫಿದಾ ಆಗಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಂತೂ #SalaarTeaser #PrashanthNeel #Prabhas ಹೆಸರುಗಳು ಟ್ರೆಂಡಿಂಗ್​ನಲ್ಲಿವೆ. ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾದ ಈ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಡೈರೆಕ್ಟ್​ ಮಾಡಿದ್ದಾರೆ. ಪ್ರಡ್ಯೂಸರ್​ ವಿಜಯ ಕಿರಗಂದೂರು ಸಲಾರ್​ಗೆ ಬಂಡವಾಳ ಹೂಡಿದ್ದಾರೆ. ಕೆಜಿಎಫ್, ಕಾಂತಾರ ನಂತರ ಹೊಂಬಾಳೆ ಫಿಲಂಸ್ ಮತ್ತೊಂದು ಬಿಗ್​ ಬಜೆಟ್​ ಸಿನಿಮಾ ರಿಲೀಸ್​ ಮಾಡಲು ಮುಂದಾಗಿದೆ. ಸೆಪ್ಟೆಂಬರ್​ 28 ರಂದು ಪ್ರಭಾಸ್​ ಅಭಿನಯದ ಸಲಾರ್​ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...