ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ ವಿಶ್ ಮಾಡಬೇಕೆನ್ನುವಾಗಲೇ ವಿಧಿ, ಅವರನ್ನು ಇನ್ಯಾವತ್ತು ಬಾರದ ಲೋಕಕ್ಕೆ ಕರೆದೊಯ್ದಿದೆ.

 

ಪವಿತ್ರ ಜಯರಾಂ. ಇವರು ಕಿರುತೆರೆಯಲ್ಲಿ ಫೇಮಸ್ ಆಗಿರುವ ನಟಿ. ಅದರಲ್ಲೂ ತೆಲುಗಿನ ‘ತ್ರಿಯನಿ’ ಧಾರಾವಾಹಿಯಲ್ಲಿ ತಿಲೋತ್ತಮೆಯಾಗಿ ತೆಲುಗು ಮಂದಿಯನ್ನು ಗೆದ್ದುದ್ದವರು. ಖಳನಾಯಕಿ ಪಾತ್ರಕ್ಕೆ ಇವರೇ ಪಕ್ಕಾ ಸೂಟ್ ಆಗ್ತಾ ಇದ್ದವರು. ಆದರೆ ಇಂದು ಆ ಖ್ಯಾತಿಯನ್ನೆಲ್ಲಾ ತ್ಯಜಿಸಿ ಬಾರದ ಲೋಕಕ್ಕೆ ಹೊರಟಿದ್ದಾರೆ.

ಪವಿತ್ರಾ ಜಯರಾಂ ಪಕ್ಕಾ ಕನ್ನಡದವರು. ಮಂಡ್ಯ ಮೂಲದವರು. ಕನ್ನಡದಲ್ಲೂ ಸಾಕಷ್ಟು ಧಾರಾವಾಹಿಗಳನ್ನು ಮಾಡಿದ್ದರು. ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಚಿಕ್ಕ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪವಿತ್ರಾ ಜಯರಾಂ ಅವರ ಸಾವಿಗೆ ತೆಲುಗು ಮಂದಿ ಕಂಬನಿ ಮಿಡಿದಿದ್ದಾರೆ.

ಇಂದು ಮುಂಜಾನೆ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದಾಗ ಕಾರು ಅಪಘಾತದಿಂದ ಈ ಘಟನೆ ಸಂಭವಿಸಿದೆ. ಮೆಹಬೂಬ ನಗರದಲ್ಲಿ ಹೋಗುತ್ತಿರುವಾಗ ಪವಿತ್ರಾ ಇದ್ದ ಕಾರಿಗೆ ಬಸ್ ಒಂದು ಡಿಕ್ಕಿಯಾಗಿದೆ. ಬಸ್ ಗುದ್ದಿದ ರಭಸಕ್ಕೆ ಪವಿತ್ರಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಜೊತೆಗೆ ಸಂಬಂಧಿಕರು ಹಾಗೂ ಸಹಪಾಠಿಗಳು ಕೂಡ ಇದ್ದರು ಎನ್ನಲಾಗುತ್ತಿದ್ದು, ಅವರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ನಟಿಯ ಸಾವಿಗೆ ಕನ್ನಡ ಹಾಗೂ ತೆಲುಗು ಕಿರುತೆರೆ ಪ್ರೇಕ್ಷಕರು ಕಣ್ಣೀರು ಹಾಕಿದ್ದು, ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *