ಕೋಲಾರದಲ್ಲಿ ರೈತನಿಗೆ ಸಿಕ್ತು ಮರಣ ಪ್ರಮಾಣ : ನೋಡಿ ಶಾಕ್ ಆದ ಬದುಕಿರುವ ರೈತ..!

suddionenews
1 Min Read

ಕೋಲಾರ : ಆಗಾಗ ಕೆಲವೊಂದು ಯಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಜಿಲ್ಲೆಯಲ್ಲಿ ಬದುಕಿರುವ ರೈತನಿಗೆ ಮರಣ ಪ್ರಮಾಣ ನೀಡಿ, ಕಂದಾಯ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಆದ್ರೆ ಆ ಯಡವಟ್ಟಿನಿಂದ ಆ ರೈತ ಶಾಕ್ ಆಗಿದ್ದಾನೆ.

ಮುಳಬಾಗಿಲು ತಾಲೂಕಿನ ಎಂ ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಅವರಿಗೆ ಹೀಗೆ ಮರಣ ಪ್ರಮಾಣ ಪತ್ರ ಸೇರಿದೆ. ಈ ಮರಣ ಪತ್ರ ಕಂಡು ಶಿವರಾಜ್ ನಿಜಕ್ಕೂ ಶಾಕ್ ಆಗಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಯ ಯಡವಟ್ಟಿನ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ರೈತ ಶಿವರಾಜ್ ಪಡಿತರ ತರಲೆಂದು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಆತನ ಹೆಸರು ಪಡಿತರದಲ್ಲಿ ಕೈ ಬಿಡಲಾಗಿತ್ತು. ಈ ಸಂಬಂಧ ವಿಚಾರಿಸಿದಾಗ ಆತ ಮರಣ ಹೊಂದಿದ್ದಾನೆಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಈ ಹಿಂದಿನ ತಹಶೀಲ್ದಾರ್ ಆಗಿದ್ದ ಜಿ ರಾಜಶೇಖರ್ ಸೇರಿದಂತೆ ಹಲವರ ವಿರುದ್ಧ ರೈತ ಶಿವರಾಜ್ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *