ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನ್ಯಾಯಯುತ ನಿರ್ಧಾರ ಅಗತ್ಯ :  ಶಶಿಕಲಾ ರವಿಶಂಕರ್

suddionenews
1 Min Read

ಹಿರಿಯೂರು, (ಡಿ.25) : ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ನ್ಯಾಯಯುತ ನಿರ್ಧಾರದ ಆಯ್ಕೆಯೇ ಪ್ರಮುಖ ಪಾತ್ರ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು.

ನಗರದ ಬೆಟ್ಸ್ ಯೂರೋಕಿಡ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದ ಅಣಕು ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಎಂದಾಕ್ಷಣ ಭಾರತ ಸಂವಿಧಾನಾತ್ಮಕ ನಡೆ, ಆಶಯಗಳು,
ಹಕ್ಕು ಮತ್ತು ಕರ್ತವ್ಯಗಳು, ಮೇಲ್ಮನೆ ,ಕೆಳಮನೆ, ಸದಸ್ಯತೆ,
ಸಭಾಪತಿ, ರಾಜ್ಯಸಭೆ , ಶಾಸಕರು ಇವರುಗಳ ಮೇಲೆ ಮತದಾರರಾದ ನಾವುಗಳು ಪ್ರಭಾವ ಬೀರುತ್ತವೆ. ಹಾಗಾಗಿ ಚುನಾವಣಾ ಪ್ರಕ್ರಿಯೆ ಚುನಾವಣಾ ಪ್ರಕ್ರಿಯೆ ಪ್ರಜೆಗಳಾದ ನಮ್ಮ ಜವಾಬ್ದಾರಿ.

ಈ ಎಲ್ಲಾ ತಿಳುವಳಿಕೆ ನಮ್ಮಲ್ಲಿ ಅದೆಷ್ಟು ಮಂದಿಗೆ ಪೂರ್ಣ ತಿಳುವಳಿಕೆಯಿದೆಯೋ ಏನೋ, ಪ್ರಪ್ರಥಮ ಬಾರಿಗೆ ಈ ಎಳೆಯ ಶಿಸ್ತಿನ ಸಿಪಾಯಿಗಳು, ಪ್ರಥಮ ಬಾರಿಗೆ ನಮ್ಮ ಬೆಟ್ಸ್ ಯೂರೋಕಿಡ್ಸ್ನ ಮಕ್ಕಳು, ವಿದ್ಯಾರ್ಥಿ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳೇ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿರುವುದು
ಅತ್ಯಂತ ಹೆಮ್ಮೆಯ ಹಾಗೂ ಶ್ಲಾಘನೀಯ ಅಂಶವಾಗಿದೆ.

ನಾಳಿನ ರಾಷ್ಟ್ರದ ಭರವಸೆಯ ಬೆಳಕನ್ನು ಈ ಶಾಲಾಮಕ್ಕಳ ಚಟುವಟಿಕೆಯಲ್ಲಿ ನಿಶ್ಚಯವಾಗಿ ಕಾಣಬಹುದು.

ಈ ಮಟ್ಟಕ್ಕೆ ಇವರನ್ನು ತಯಾರು ಮಾಡಿದ ಸಂಸ್ಥೆಯ ಅಧ್ಯಕ್ಷರಾದ ಘನಶಂಕರ ಅವರು, ಸಹಕರಿಸಿದ ಡಾಕ್ಟರ್ ಸುನಿಲ್ ಅವರು ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿಯವರು  ಅಭಿನಂದನೀಯರು ಎಂದು ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *