ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಮಹತ್ವದ ಸೂಚನೆ : ಈ ಕೆಲಸಕ್ಕೆ ಹಣ ಕೇಳಿದರೆ ದೂರು ನೀಡಿ

1 Min Read

 

ಚಿತ್ರದುರ್ಗ. ನ.25: ವಿಫಲವಾದ  ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ.
ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಗ್ರಾಮೀಣ, ಹೊಳಲ್ಕೆರೆ, ಹೊಸದುರ್ಗ, ಶ್ರೀರಾಂಪುರ ಉಪವಿಭಾಗದ ವ್ಯಾಪ್ತಿಯಲ್ಲಿ ಪರಿವರ್ತಕಗಳು ವಿಫಲವಾದರೆ ನಗರ ವ್ಯಾಪ್ತಿಯಲ್ಲಿ 24 ಗಂಟೆಯೊಳಗಾಗಿ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 72 ಗಂಟೆಯೊಳಗೆ ಪರಿವರ್ತಕವನ್ನು ಬದಲಾಯಿಸಲು ನಿಯಮವಿದ್ದು, ಬಫರ್‍ಸ್ಟಾಕ್ ಅಡಿಯಲ್ಲಿ ಎಲ್ಲಾ ಉಪವಿಭಾಗಗಳಿಗೆ ಪರಿವರ್ತಕಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಪರಿವರ್ತಕಗಳನ್ನು ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಉಪವಿಭಾಗದಲ್ಲಿ ಗಜಲಕ್ಷ್ಮೀ ಎಂಟರ್‍ಪ್ರೈಸೆಸ್ ಅವರು ಹೊಳಲ್ಕೆರೆ ಉಪವಿಭಾಗದಲ್ಲಿ ಸಾಯಿರಾಮ್ ಎಂಟರ್‍ಪ್ರೈಸ್ಸಸ್ ಅವರು ಹಾಗೂ ಹೊಸದುರ್ಗ ಮತ್ತು ಶ್ರೀರಾಂಪುರ ಉಪವಿಭಾಗದಲ್ಲಿ ವಿಘೇಶ್ವರ ಎಂಟರ್‍ಪ್ರೈಸಸ್ ಏಜೆನ್ಸಿ ಅವರಿಗೆ ನೀಡಲಾಗಿದ್ದು, ಪರಿವರ್ತಕಗಳನ್ನು ರಿಪೇರಿ ಮಾಡಿ ಸರಬರಾಜು ಮಾಡುತ್ತಿದ್ದಾರೆ.

ವಿಫಲವಾದ ಪರಿವರ್ತಕ ಬದಲಾವಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಹಾಗೂ ದೂರುಗಳಿಗಾಗಿ ಬೆಸ್ಕಾಂ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ದೂರವಾಣಿ ಸಂಖ್ಯೆ 9448279014 ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ದೂರವಾಣಿ ಸಂಖ್ಯೆ 9449842739 ಗೆ ಸಂಪರ್ಕಿಸಬಹುದು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *