ಪಿಯುಸಿಯಲ್ಲಿ 2 ಬಾರಿ ಫೇಲ್.. ಯುಪಿಎಸ್ಸಿಯಲ್ಲಿ ಪಾಸ್.. ಕನ್ನಡದಲ್ಲೇ ಪರೀಕ್ಷೆ ಬರೆದ ಬಳ್ಳಾರಿಯ ಶಾಂತಪ್ಪ ಬಗ್ಗೆ ಇಲ್ಲಿದೆ ಮಾಹಿತಿ

ಬಳ್ಳಾರಿ: ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 1016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕದ ಶಾಂತಪ್ಪ ಜಡೆಮ್ಮನವರ್ ಕೂಡ ತೇರ್ಗಡೆಯಾಗಿದ್ದಾರೆ. ಶಾಂತಪ್ಪ ಮೂಲತಃ ಬಳ್ಳಾರಿಯವರು. ಕನ್ನಡದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.

ಶಾಂತಪ್ಪ ಪಿಯುಸಿ ಓದುತ್ತಿದ್ದಾಗ ಎರಡು ಬಾರಿ ಫೇಲ್ ಆಗಿದ್ದರು. ಆದರೆ ಹಠ ಬಿಡದೆ ಅದನ್ನು ಪಾಸ್ ಮಾಡಿಕೊಂಡಿದ್ದರು. ಬಳಿಕ ಇನ್ಸ್‌ಪೆಕ್ಟರ್ ಹುದ್ದೆಗೂ ಆಯ್ಕೆಯಾಗಿದ್ದರು. ಆ ಕೆಲಸದಲ್ಲಿ ಇದ್ದುಕೊಂಡೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದಾರೆ. ಕನ್ನಡದಲ್ಲಿಯೇ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.

ಬೆಂಗಳೂರಿನ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸದ್ಯ 644 ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಶಾಂತಪ್ಪನವರು ಚಿಕ್ಕ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಸ್ವಲ್ಪ ಹೊಲದಲ್ಲಿಯೇ ತಾಯಿ ವ್ಯವಸಾಯಾಡಿ ಮಗನನ್ನು ಓದಿಸಿದ್ದರು. ಸರ್ಕಾರಿ ಶಾಲೆಯಲ್ಲಿಯೇ ಓದಿದ್ದ ಇವರು, ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳುವ ಹಠ ಹೊಂದಿದ್ದರು. ಅದಕ್ಕೆಂದೆ ಕಷ್ಟಪಟ್ಟು ಓದಿದರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರು. ಶಾಂತಪ್ಪ ತಮ್ಮ ಪ್ರತಿಭೆಯಿಂದ ಐದಾರು ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಯುಪಿಎಸ್ಸಿ ಪಾಸ್ ಮಾಡಬೇಕೆಂದು ಹಠ ತೊಟ್ಟು ಈಗ ಅದರಲ್ಲೂ ಪಾಸ್ ಆಗಿದ್ದಾರೆ. ಕೊರೊನಾ ಸಮಯದಲ್ಲು ಬಡ ಮಕ್ಕಳಿಗೆ ಪಾಠವನ್ನು ಮಾಡುತ್ತಿದ್ದರು. ಈಗಲೂ ಇವರಿಂದ 50 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ಕೆಲವೊಂದು ಸೋಷಿಯಲ್ ಸರ್ವೀಸ್ ಕೂಡ ಮಾಡುತ್ತಾ ಇರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *