ಗುಜರಾತ್ ನಲ್ಲಿ ಬಿಜೆಪಿ ಪಕ್ಷದ ಬಗ್ಗೆ ಬಹಳಷ್ಟು ಕಟುವಾಗಿ ಮಾತನಾಡುತ್ತಿದ್ದ ವ್ಯಕ್ತಿಯೆಂದರೆ ಅದು ಹಾರ್ದಿಕ್ ಪಾಟೀಲ್. ಪಾಟೀದಾರ್ ಸಮುದಾಯದ ಒಬ್ಬ ಸಾಮಾನ್ಯ ವ್ಯಕ್ತಿ ಈಗ ಸಿಕ್ಕಾಪಟ್ಟೆ ಸ್ಟ್ರಾಂಗ್ ವ್ಯಕ್ತಿ. ಯಾವ ಪಕ್ಷವನ್ನು ಟೀಕಿಸುತ್ತಿದ್ದರೋ ಇದೀಗ ಅದೇ ಪಕ್ಷಕ್ಕೆ ಹಾರ್ದಿಕ್ ಸೇರ್ಪಡೆಯಾಗುತ್ತಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ, ನಾನೊಬ್ಬ ಸಣ್ಣ ಯೋಧ ಎಂದಿದ್ದಾರೆ.
ಹಾರ್ದಿಕ್ ಗೆ ಕಾಂಗ್ರೆಸ್ ನಲ್ಲಿ ಅಂದುಕೊಂಡಷ್ಟು ಪ್ರಾಮುಖ್ಯತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತ್ತಿಚೆಗೆ ಕಾಂಗ್ರೆಸ್ ತೊರೆದಿದ್ದರು. ಈ ವೇಳೆ ಸೋನಿಯಾಗಾಂಧಿಗೆ ಪತ್ರ ಬರೆದು ರಾಹುಲ್ ಗಾಂಧಿ ಮೇಲೆ ನೇರ ಆರೋಪ ಮಾಡಿದ್ದರು. ಜೊತೆಗೆ ಬಿಜೆಪಿಯ ಕೆಲವು ಕಾರ್ಯಗಳನ್ನು ಹೊಗಳಿದ್ದರು. ಇದೀಗ ಅದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಹಾರ್ದಿಕ್ ಪಾಟೀಲ್ ಅಮಿತ್ ಶಾ ಅವರ ಮೇಲೆ 1200 ಕೋಟಿ ಆರೋಪ ಹೊರಿಸಿದ್ದರು. ಅಷ್ಟೆ ಅಲ್ಲ ಅವರನ್ನು ಜನರಲ್ ಡಯರ್ ಎಂದೇ ಉಲ್ಲೇಖಿಸಿದ್ದರು. ಪ್ರಧಾನಿ ಮೋದಿಯವರ ಆರ್ಥಿಕ ನೀತಿಯನ್ನು ವಿರೋಧಿಸುತ್ತಿದ್ದರು. ಆದರೆ ಇದೀಗ ಅಧಿಕೃತವಾಗಿ ಅದೇ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹಾರ್ದಿಕ್, ರಾಷ್ಟ್ರ, ಪ್ರಾದೇಶಿಕ ಮತ್ತು ಸಾಮಾಜಿಕ ಹಿತಾಸಕ್ತಿಯ ಭಾವನೆಯೊಂದಿಗೆ ಹೊಸದೊಂದು ಅಧ್ಯಾಯ ಆರಂಭಿಸಲಿದ್ದೇನೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಣ್ಣ ಯೋಧನಾಗಿ ಕೆಲಸ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.