ಚಿತ್ರದುರ್ಗ : ನಗರದ ಕಲ್ಯಾಣ ಮಂಟಪವೊಂದರಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಬಡಾವಣೆ ಡಪೊಲೀಸರು
ಯಶಸ್ವಿಯಾಗಿದ್ದಾರೆ. ಮತ್ತು ಆತನಿಂದ ₹ 3,92,000/- ಬೆಲೆ ಬಾಳುವ 80 ಗ್ರಾಂ ತೂಕದ ಬಂಗಾರದ ಆಭರಣಗಳನ್ನು
ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಬಳ್ಳಾರಿಯ ಕಪ್ಪಗಲ್ ರಸ್ತೆಯ ನಿವಾಸಿ ಆಟೋ ಮತ್ತು ಕಾರು ಚಾಲಕ ಶ್ರೀರಾಮು(31) ಬಂಧಿತ ಆರೋಪಿ.
ಆರೋಪಿಯು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದು,
ಕಲ್ಯಾಣ ಮಂಟಪದಲ್ಲಿ 80 ಗ್ರಾಂ ತೂಕದ ಬಂಗುಾರದ ಆಭರಣಗಳನ್ನು ಕಳವುಮಾಡಿದ್ದನು.
ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದ ಶಿವಶಂಕರ ಗೌಡ ಅವರು ನೀಡಿದ ದೂರಿನನ್ವಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ
ಎಸ್.ಜೆ.ಕುಮಾರಸ್ವಾಮಿ
ಮಾರ್ಗದರ್ಶನದಲ್ಲಿ, ರೋಷನ್ ಜಮೀರ್, ಪ್ರಭಾರೆ ಡಿ.ವೈ.ಎಸ್.ಪಿ ಚಿತ್ರದುರ್ಗ
ಉಪವಿಭಾಗಬರವರ ಉಸ್ತುವಾರಿಯಲ್ಲಿ ಬಡಾವಣೆ ವೃತ್ತದ ವೃತ್ತನಿರೀಕ್ಷಕರಾದ ಬಿ.ಜಿ.ಶಂಕರಪ್ಪ, ಸಿಪಿಐ, ಬಡಾವಣೆ
ವೃತ್ತ, ಶ್ರೀಮತಿ ಗೀತಮ್ಮ.ಕೆ.ಆರ್, ಪಿಎಸ್‍ಐ, ಬಡಾವಣೆ ಠಾಣೆ ರವರು ಸಿಬ್ಬಂದಿಯವರಾದ ಮಂಜುನಾಥ, ಪರಶುರಾಮ ಕೊಂಡಜ್ಜಿ, ಮಂಜಪ್ಪ. ಎಂ.ಆರ್, ಕದುರಪ್ಪ, ರಮೇಶಬಾಬು, ವಿರೇಶ, ಲೋಕೇಶ್ವರ,
ಬಸವರಾಜ ರವರ ತಂಡ ರಚಿಸಿ, ಪ್ರಕರಣದ ತನಿಖೆಗೆ ಸೂಚಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಜುಲೈ 05 ರಂದು ನಗರದ ಚಳ್ಳಕೆರೆ ಸರ್ಕಲ್ ಬಳಿಯ ಕಲ್ಯಾಣ ಮಂಟಪದ ಹತ್ತಿರ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು, ಆರೋಪಿತನಿಂದ ಪ್ರಕರಣದಲ್ಲಿ ಕಳುವಾಗಿದ್ದ
3,92,000/-ರೂ.ಬೆಲೆ ಬಾಳುವ 80 ಗ್ರಾಂ ತೂಕದ ಬಂಗಾರದ ಆಭರಣಗಳನ್ನು
ವಶಪಡಿಸಿಕೊಳ್ಳುವಳ್ಳಿ ಯಶಸ್ವಿಯಾಗಿದ್ದಾರೆ.
ಬಡಾವಣೆ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರು ಶ್ಲಾಘಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.