ಬೆಂಗಳೂರು: ತುಮಕೂರಿನಿಂದ ಸಿಲಿಕಾನ್ ಸಿಟಿಗೆ ಪ್ರತಿದಿನ ಸಾವಿರಾರು ಜನ ರೈಲು, ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಮೆಟ್ರೋ ವಿಸ್ತರಣೆಯಾದರೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.
ಬೆಂಗಳೂರಿನಿಂದ ತುಮಕೂರಿನವರೆಗೆ ‘ನಮ್ಮ ಮೆಟ್ರೋ’ ಸೇವೆ ಬಗ್ಗೆ ಡಿಪಿಐಆರ್ ಯೋಜನೆಯಡಿ ಅನುಮೋದನೆಗೆ ಡಾ.ಜಿ.ಪರಮೇಶ್ವರ್ ಅವರು ಸರ್ಕಾರದ ಜೊತೆ ಚಿಂತನೆ ನಡೆಸಿದ್ದಾರಂತೆ. ಸುಮಾರು 25 ಸಾವಿರ ಕೋಟಿ ಪ್ರಾಜೆಕ್ಟ್ನಲ್ಲಿ ಮೆಟ್ರೋ ಸೇವೆ ಕಲ್ಪಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ತುಮಕೂರಿನವರೆಗೆ ಮೆಟ್ರೋ ಸೇವೆ ನಿರ್ಮಾಣಕ್ಕೆ ಸರ್ಕಾರದ ಚಿಂತನೆ ಮಾಡುತ್ತಿದೆ. ಮೆಟ್ರೋ ನಿರ್ಮಾಣದ ಬಗ್ಗೆ ಈಗಾಗಲೇ ಎರಡು ಕಂಪನಿಗಳ ಉತ್ಸಾಹ ತೋರಿಸಿದ್ದು, ಪಿಪಿಪಿ ಮಾಡಲ್ನಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಈ ಹಿಂದೆ ನಮ್ಮ ಮೆಟ್ರೋ ತವರು ಜಿಲ್ಲೆಗೆ ವಿಸ್ತರಣೆ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಇದೀಗ ಜಿ ಪರಮೇಶ್ವರ್ ಅವರು ತವರು ಜಿಲ್ಲೆಗೆ ನಮ್ಮ ಮೆಟ್ರೋ ವಿಸ್ರಿಸುವ ಬಗ್ಗೆ ಮಾತನಾಡಿದ್ದಾರೆ.