ಬೆಂಗಳೂರು: ಪಬ್ ಗೆ ಹೆಚ್ಚು ಸಮಯ ನೀಡಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಸರ್ಕಲ್ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿತ್ತು. ಇದಾದ ಬಳಿಕ ನಿನ್ನೆ ಅವರ ನಿಧನವಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ನಂದೀಶ್ ಸಾವಿನ ವಿಚಾರಕ್ಕೆ ಕುಮಾರಸ್ವಾಮಿ ತಮ್ಮ ಸುದ್ದಿಗೋಷ್ಟಿಯಲ್ಲಿ ಬೇರೆಯದ್ದೆ ವಿಚಾರ ಹೇಳಿದ್ದಾರೆ.
ಅಮಾನತುಗೊಂಡಿದ್ದ ನಂದೀಶ್ ಸಾವು ಹೃದಯಾಘಾತದಿಂದ ಆಗಿರುವುದಲ್ಲ, ಬದಲಾಗಿ ಇದೊಂದು ಕೊಲೆ. ಹಿರಿಯ ಅಧಿಕಾರಿಗಳ ಉದ್ಧಟತನಕ್ಕೆ ಬ್ರೇಕ್ ಹಾಕಬೇಕು. ಈ ಪ್ರಕರಣವನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮೃತ ನಂದೀಶ್ ಅವರು ಪಬ್ ಒಂದಕ್ಕೆ ಅವಧಿ ಮೀರಿ ನಡೆಸಲು ಸಹಕಾರ ಕೊಟ್ಟಿದ್ದರು ಎಂಬ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿತ್ತು. ಮಧ್ಯರಾತ್ರಿ 2-3 ಗಂಟೆಯವರೆಗೂ ತೆರೆಯಲು ಅವಕಾಶ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಆದರೆ ರಾತ್ರಿ 1 ಗಂಟೆಯವರೆಗೂ ಪಬ್ ತೆರೆಯುವುದಕ್ಕೆ ಸರ್ಕಾರವೇ ಅವಕಾಶ ನೀಡಿದೆ. ಆದರೆ ಅಂದು 3 ಗಂಟೆಯ ತನಕ ಪಬ್ ತೆರೆಯುವುದಕ್ಕೆ ಅಲ್ಲಿ ಯಾವ ರಾಜಕಾರಣಿಗಳ ಬೆಂಬಲಿಗರು ಇದ್ದರು..? ಆ ಪಬ್ ನಲ್ಲಿ ಪೊಲೀಸರು ಕೂಡ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಟ್ಕಾ ದಂಧೆ, ಕ್ಯಾಸಿನೋ ದಂಧೆ ನಡೆಯುತ್ತಿದೆ. ಅಧಿಕಾರಿಗಳ ಬೆಂಬಲವೂ ಇದಕ್ಕೆ ಇದೆ. ನಂದೀಶ್ ಅಮಾನತಾದ ಬಳಿಕ ಅದನ್ನು ತೆರವುಗೊಳಿಸಲು ವಿರೋಧ ಪಕ್ಷದ ನಾಯಕರ ಬಳಿ ಹೋಗಿದ್ದಾರೆಂಬ ಮಾಹಿತಿ ಇದೆ. ಪೋಸ್ಟಿಂಗ್ ಮಾಡುವಾಗಲೇ 70-80 ಲಕ್ಷ ಲಂಚ ಪಡೆಯುತ್ತಾರೆ. ಅದನ್ನು ಎಲ್ಲಿಂದ ತರಬೇಕಾಗುತ್ತದೆ. ಹೈಕಮಾಂಡ್ ಮೂಲಕ ಐಎಎಸ್ ಆಫೀಸರ್ ಗಳು ಪ್ರಮುಖ ಹುದ್ದೆ ಪಡೆದು ರಾಜ್ಯದ ಸಣ್ಣ ಪುಟ್ಟ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸುತ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.