ಚಾಮರಾಜನಗರ: ಮನುಷ್ಯನ ಜೀವದ ಜೊತೆ ಕೆಲ ಆಸ್ಪತ್ರೆಗಳ ಸಿಬ್ಬಂದಿ ಆಟವಾಡುತ್ತಲೆ ಇರುತ್ತಾರೆ. ಮೆಡಿಸನ್ ವಿಚಾರದಲ್ಲಿ ಕೊಂಚ ಎಚ್ಚರ ತಪ್ಪಿದರು ಪ್ರಾಣಕ್ಕೆ ಅಪಾಯ ಎಂದು ಗೊತ್ತಿರುತ್ತೆ. ಆದರೂ ಆ ಎಚ್ಚರವನ್ನು ಒಮ್ಮೊಮ್ಮೆ ಮರೆತು ವರ್ತಿಸುತ್ತಾರೆ. ಇದೀಗ ಅಂಥದ್ದೆ ಘಟನೆ ಜಿಲ್ಲೆಯ ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಆರೋಗ್ಯ ಕೇಂದ್ರದಲ್ಲಿ ದಾಖಲಾದ ರೋಗಿಗಳಿಗೆ ಅವಧಿ ಮೀರಿದ ಗ್ಲೂಕೋಸ್ ಕೊಟ್ಟ ಪರಿಣಾಮ ಮೂವರು ರೋಗಿಗಳು ಅಸ್ವಸ್ಥರಾಗಿದ್ದಾರೆ. ಈ ಘಟನೆ ಖಂಡಿಸಿ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಎಲ್ಲವೂ ಗೊತ್ತಿದ್ದೆ ಈ ರೀತಿ ನಡೆದುಕೊಂಡಿದ್ದಾರೆ. ಅವಧಿ ಮೀರಿದ ಗ್ಲೂಕೋಸ್ ಕೊಟ್ಟು, ರೋಗಿಗಳ ಈ ಸ್ಥಿತಿಗೆ ಕಾರಣವಾಗಿದ್ದಾರೆ. ಆ ತಪ್ಪನ್ನು ಮುಚ್ಚಲು ಮತ್ತೊಂದು ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಆಸ್ಪತ್ರೆಯಲ್ಲಾ ಹುಡುಕಾಡಿದಾಗ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಗಳಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಾರ್ವಜನಿಕರು ಆಸ್ಪತ್ರೆಯ ವಿರುದ್ಧ ಮತ್ತಷ್ಡು ಆಕ್ರೋಶಗೊಂಡಿದ್ದಾರೆ. ಸಾರ್ವಜನಿಕರ ಪ್ರತಿಭಟನೆಯಿಂದ ಆಸ್ಪತ್ರೆಯಿಂದ ವೈದ್ಯರು ಕಾಲ್ಕಿತ್ತಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರಯ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.