ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ದೇಶವೇ ಕಾಯುತ್ತಿದೆ. ನಾಳೆಯೇ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಎಕ್ಸಿಟ್ ಪೋಲ್ ಹೊರ ಬಿದ್ದಿದ್ದು, ಬಿಜೆಪಿಯೇ ಮತ್ತೆ ಅಧಿಕಾರದ ಗದ್ದುಗೆ ಏರಲಿರುವ ಸೂಚನೆ ನೀಡಲಾಗಿದೆ. ಎಕ್ಸಿಟ್ ಪೋಲ್ ಬಳಿಕ ಷೇರು ಮಾರುಕಟ್ಟೆಯಲ್ಲಿ ಬಾರೀ ಸಂಚಲನವನ್ನೇ ಸೃಷ್ಟಿಸಿದೆ.
ಸೆನ್ಸೆಕ್ಟ್ 2000 ಸಾವಿರ ಪಾಯಿಂಟ್ ಗೆ ಜಿಗಿತ ಕಂಡರೆ, ನಿಫ್ಟಿ 600 ಅಂಕ ಜಾಸ್ತಿಯಾಗಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ 2621.98 ಪಾಯಿಂಟ್ ಆಗಿದೆ. 76,583 ಮಟ್ಟದಲ್ಲಿ ಪ್ರಾರಂಭವಾಗಿದೆ. ಎನ್ಎಸ್ಇ (National Stock Exchange) ನಿಫ್ಟಿ 807.20 ಪಾಯಿಂಟ್ (ಶೇ.3.58) ನೊಂದಿಗೆ ಆರಂಭವಾಗಿದೆ.
ಈ ಮೂಲಕ ಷೇರು ಮಾರುಕಟ್ಟೆಯು ಐತಿಹಾಸಿಕ ಉತ್ತುಂಗದಲ್ಲಿದೆ ಎಂದು ತಜ್ಞರು ವಿಶ್ಲೇಸುತ್ತಿದ್ದಾರೆ. ಎಕ್ಸಿಟ್ ಪೋಲ್ ಬಳಿಕವೇ ಷೇರು ಮಾರುಕಟ್ಟರ ಇಷ್ಟೊಂದು ಏರಿಕೆಯಾಗಿರುವಾಗ, ನಾಳೆ ಫಲಿತಾಂಶ ಹೊರ ಬಿದ್ದ ಬಳಿಕ ಇನ್ನು ಏನೆಲ್ಲಾ ಬದಲಾವಣೆಯಾಗಬಹುದು ಎಂಬುದರ ಕುತೂಹಲವಿದೆ.
ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇತ್ತು. ಬಿಜೆಪಿಯನ್ನು ಸೋಲಿಸಲೇಬೇಕೆಂಬ ಹಠಕ್ಕೆಕಾಂಗ್ರೆಸ್ ಬಿದ್ದಿತ್ತು. ಹೀಗಾಗಿ ಇಂಡಿಯಾ ಎಂಬ ಮೈತ್ರಿ ಕೂಟ ರಚನೆ ಮಾಡಿ, ಸ್ಪರ್ಧೆಗೆ ಇಳಿದಿತ್ತು. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಸ್ಪರ್ಧೆ ನಡೆಸಿರುವುದೇ ಮೂರು ಕ್ಷೇತ್ರ. ಸದ್ಯ ಎಕ್ಸಿಟ್ ಪೋಲ್ ನಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲಬಹುದು ಎಂದೇ ಹೇಳಲಾಗುತ್ತಿದೆ. ಎರಡು ಕ್ಷೇತ್ರದಲ್ಲಾದರೂ ಜೆಡಿಎಸ್ ಬರುವ ಗ್ಯಾರಂಟಿಯನ್ನು ಎಕ್ದಿಟ್ ಪೋಲ್ ನೀಡಿದೆ.