ತುಮಕೂರು: ಜಗತ್ತು ತಾಂತ್ರಿಕವಾಗಿ ಬೆಳವಣಿಗೆ ಹೊಂದುತ್ತಿರುವ ದಿಶೆಯಲ್ಲಿ ಅನೇಕ ಆವಿಷ್ಕಾರಗಳು ಮಾನವನಿಗೆ ಸಹಕಾರಿಯಾಗಿವೆ ಅಂತರ್ಜಾಲದಲ್ಲಿ ಬರುವ ಕೆಲವು ವಿಚಾರಗಳು ಮನುಷ್ಯನ ಒಳಿತು ಮತ್ತು ಕೆಡುಕುಗಳಿಗೆ ಕಾರಣವಾಗಿದ್ದು ಇಂದಿನ ಯುವ ಸಮೂಹ ಸದಾ ಮೊಬೈಲ್ ನಲ್ಲಿ ಮುಳುಗಿ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಅನಗತ್ಯ ವಿಚಾರಗಳ ಬಳಕೆಯಿಂದ ಹಾದಿ ತಪ್ಪುತ್ತಿದ್ದಾರೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳವರು ತಿಳಿಸಿದರು.
ಮಠದಲ್ಲಿ ಮಾತನಾಡಿದ ಶ್ರೀಗಳು, ಸೋಶಿಯಲ್ ಮೀಡಿಯಾಗಳಲ್ಲಿ ಬರುವ ರೀಲ್ಸ್ ಮತ್ತು ರಿಯಾಲಿಟಿ ಷೋಗಳಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಸಮೂಹ ಕೆಟ್ಟ ಸಂಸ್ಕೃತಿಯತ್ತ ವಾಲುತ್ತಿದೆ. ಈ ಕಾರ್ಯಕ್ರಮಗಳ ವ್ಯವಸ್ಥಾಪಕರುಗಳು ತಮ್ಮ ಒಳ ಆಂತರ್ಯವನ್ನು ಸರಿಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಚಿಕ್ಕ ಚಿಕ್ಕ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದು ಪುಸ್ತಕ ಹಿಡಿಯುವ ಕೈಯಲ್ಲಿ ಮೊಬೈಲ್ ಹಿಡಿಯುವುದು ಇತ್ತೀಚಿನ ಟ್ರೆಂಡ್ ಆಗಿದೆ, ಪೋಷಕರು ನೆಚ್ಚಿನ ಮಕ್ಕಳಿಗೆ ಮೊಬೈಲ್ ಗಿಳಿಗೆ ಬೀಳದಂತೆ ಎಚ್ಚರ ವಹಿಸಬೇಕು ಎಂದು ತಿಳುವಳಿಕೆ ಹೇಳಿದರು. ಈಗಿನ ಕಾಲದ ಪೋಷಕರು ಹಾಗೇ ಮಕ್ಕಳು ಹಠ ಮಾಡಿದರೆ ಅಥವಾ ಪೋಷಕರಿಗೇನೋ ಕೆಲಸದ ಒತ್ತಡವಿದೆ ಎಂದಾಗ ಸುಲಭವಾಗಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂತು ಬಿಡುತ್ತಾರೆ. ಆದರೆ ಅದರಿಂದ ಮಕ್ಕಳ ಬೆಳವಣಿಗೆ ಮೇಲೆ ಎಷ್ಟೆಲ್ಲಾ ಅಡ್ಡ ಪರಿಣಾಮಗಳು ಆಗಬಹುದು ಎಂಬ ಯೋಚನೆಯೂ ಇಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ಬೆಳವಣಿಗೆ ಮಕ್ಕಳ ಮೇಲೆ ಕೆಟ್ಟ ಬೆಳವಣಿಗೆಯನ್ನೇ ಬೀರುತ್ತದೆ. ಇದರ ಬಗ್ಗೆ ಇದೀಗ ಸ್ವಾಮೀಜಿಯೂ ಎಚ್ಚರಿಸಿದ್ದಾರೆ.