ಮಂಡ್ಯ: ನಮ್ಮ ರಾಜಕೀಯ ವೈರಿಗಳಾದ ಚೆಲುವರಾಯಸ್ವಾಮಿ ಮತ್ತು ಸುರೇಶ್ ಗೌಡರನ್ನು ಏಕಕಾಲದಲ್ಲಿ ಸೋಲಿಸುವ ಕಾಲ ಈಗ ಬಂದಿದೆ. ನನ್ನ ಬದ್ಧ ವೈರಿಗಳು ಅವರು. ನಾನೀಗ ಫ್ರೀ ಬರ್ಡ್. ಚುನಾವಣೆ ಹತ್ತಿರವಾದಾಗ ಮುಖಂಡರ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಕೆಲವರು ಕಾಂಗ್ರೆಸ್ ನವರು ಮಾತಾಡ್ತಾರೆ. ಸುರೇಶ್ ಗೌಡರ ವೋಟನ್ನೇ ಕಿತ್ತುಕೊಳ್ಳುತ್ತಾರೆ ಈ ಶಿವರಾಮೇಗೌಡರು. ನಾವೂ ಒಳಗೊಳಗೆ ಗೆಲ್ಲಬಹುದು ಅಂತ ತಿಳಿದುಕೊಂಡವರೆ. ಒಳಗಿನ ಕಿಂಡಿ ಕಿತ್ತು ತೂತಾಗಿದೆ. ಅವರಿಗೆ ಗೊತ್ತಿಲ್ಲ ಪಾಪ.
ಪ್ರತಿ ಊರಲ್ಲಿ ಮೂರು ಗುಂಪು ಆಗುತ್ತೆ. ಯಾವ ಊರಲ್ಲಿ ಎರಡು ಗುಂಪು ಇದೆಯೋ ಅಲ್ಲಿ ಮೂರು ಗುಂಪು ಮಾಡ್ತೀನಿ. ನಂದು ಇರಲೇ ಬೇಕು. ಅವರದ್ದು ಇರುತ್ತೋ ಇಲ್ಲವೋ ಗೊತ್ತಿಲ್ಲ. ಎಲ್ಲಾ ಹಳ್ಳಿಯಲ್ಲೂ ನನ್ನ ಒಂದು ಗುಂಪು ಮಾಡ್ತೀನಿ. ಇನ್ನು ಸ್ಪೀಡ್ ಮಾಡ್ತೀವಿ. ನಾನು ನನ್ನ ಮಗ ಮನೆ ಮಾಡುತ್ತಿರುವುದು ಶಿವರಾಮೇಗೌಡ ಈ ಊರು ಬಿಟ್ಟು ಹೋಗಲ್ಲ ಎಂಬುದು ಗೊತ್ತಾಗಲಿ ಅಂತ.
ನಮ್ಮ ಹೋರಾಟ ನಿರಂತರ ಈ ಚುನಾವಣೆ ಮುಗಿಯುವ ತನಕ ನಿದ್ದೆ ಮಾಡುವುದಿಲ್ಲ. ಕುಮಾರಸ್ವಾಮಿ ಅವರ ಮೇಲಾಗಲಿ, ದೇವೇಗೌಡರ ಮೇಲಾಗಲಿ ದೂರು ಇಲ್ಲವೇ ಇಲ್ಲ. ಅವರಿಬ್ಬರ ಬಗ್ಗೆಯೂ ಒಂದು ಗೌರವ ಇದೆ. ನಂಗೆ ಆ ಪಕ್ಷದಲ್ಲಿ ಒಂದು ಸ್ಥಾನಮಾನ ಕೊಟ್ಟಿದ್ದರು. ನಮ್ಮ ತಾಲೂಕು ಜಿಲ್ಲೆಯಲ್ಲಿ ಸೇರಿಕೊಂಡ ಕೆಲವರು ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. ನನ್ನ ಖೆಡ್ಡಕ್ಕೆ ಕೆಡವಿದ್ದಾರೆ. ಕುಮಾರಸ್ವಾಮಿಯವರು ಯೋಚನೆ ಮಾಡಲು ಸಮಯ ಇತ್ತು. ಅವರು ಬೇಗ ತೀರ್ಮಾನ ತಗೊಂಡ್ರು ಅದಕ್ಕೆ ನಾನು ಬದ್ಧವಾಗಿದ್ದೇನೆ ಎಂದಿದ್ದಾರೆ.