Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಜನಾರ್ದನ ರೆಡ್ಡಿ ಬಗ್ಗೆ ಬೇಸರ ಹೊರ ಹಾಕಿದ ಮಾಜಿ ಸಚಿವ ಶ್ರೀರಾಮುಲು..!

---Advertisement---

ಬಳ್ಳಾರಿ: ನನ್ನನ್ನ ರಾಜಕೀಯವಾಗಿ ಮುಗಿಸೋದಕ್ಕೆ ಜನಾರ್ದನ ರೆಡ್ಡಿ ಯತ್ನ ಮಾಡ್ತಾ ಇದ್ದಾರೆ ಎಂದು ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ನಾನು ಕೆಲಸ ಮಾಡಿಲ್ಲ ಅಂತ ಜನಾರ್ದನ ರೆಡ್ಡಿ ಹೇಳಿದ್ದಾರೆ. ರೆಡ್ಡಿ ಮಾತನ್ನ ಕೇಳಿ ನನ್ನ ಬಗ್ಗೆ ಲಘಿವಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ತಾನೂ ಅಂದುಕೊಂಡಂಗೆ ನಡೆಯಬೇಕು ಎಂಬ ಮನಸ್ಥಿತಿ ಜನಾರ್ದನ ರೆಡ್ಡಿ ಅವರಿಗಿದೆ ಎಂದು ಶ್ರೀರಾಮುಲು ಆಕ್ರೋಶ ಹೊರ ಹಾಕಿದ್ದಾರೆ.

ಟಿವಿ9 ಚಾನೆಲ್ ನಲ್ಲಿ ಮಾತನಾಡಿದ್ದ ಶ್ರೀರಾಮುಲು ಅವರು, ‘ನಾವೇನು ಜನಾರ್ದನ್ ರೆಡ್ಡಿ ವಿರುದ್ಧವು ಅಲ್ಲ, ಪಾರ್ಟಿ ವಿರುದ್ಧವೂ ಅಲ್ಲ. ಯಾರೇ ಮಾಡಿದರೂ ಪಾರ್ಟಿ ಕೆಲಸ ಮಾಡಬೇಕು. ಜನಾರ್ದನ ರೆಡ್ಡಿ ಅವರು ಈಗ ಏನ್ ಮಾಡ್ತಾ ಇದಾರೆ ಅಂದ್ರೆ ಅವರು ಅವರದ್ದೇ ಆದ ಗುಂಪುಗಾರಿಕೆ ಮಾಡಿಕೊಂಡಿದ್ದಾರೆ. ಆ ಗುಂಪುಗಾರಿಕೆಯಿಂದ ನಮ್ಮಂಥವರ ವಿರುದ್ಧವಾಗಿ ಯಾರೆಲ್ಲ ಇದ್ದಾರೆ, ಅವರನ್ನೆಲ್ಲ ಬಳಸಿಕೊಂಡು, ಅವರ ಮೂಲಕ ವಾಟ್ಸಾಪ್, ಫೇಸ್ಬುಕ್ ನಲ್ಲಿ ನಮ್ಮನ್ನ ಕೆಟ್ಟದಾಗಿ ಮಾತನಾಡಿಸುವಂತೆ ಮಾಡಿದ್ದಾರೆ ಎಂದಿದ್ದಾರೆ.

ಇದೆಲ್ಲಾ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಬಳಿ ಈ ಎಲ್ಲಾ ವಿಚಾರ ಹೋಗಿದ್ದರ ಬಗ್ಗೆ ಮಾತನಾಡಿದ ಶ್ರೀರಾಮುಲು, ಬಹುಶಃ ಜನಾರ್ದನ ರೆಡ್ಡಿ ಅವರೇ ಹೇಳಿರುವಂತದ್ದು ಇಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸ್ತಾ ಇದೆ. ಜನಾರ್ದನ ರೆಡ್ಡಿ ಅವರಿಗೆ ಏನು ಅಂದ್ರೆ ಅವರು ಅಂದುಕೊಂಡಿದ್ದೆ ನಡೆಯಬೇಕು. ನಾವೂ ಪಾರ್ಟಿ ಅಂದುಕೊಂಡಿದ್ದರ ಪ್ರಕಾರ ನಡೆಹುತ್ತೇವೆ. ಒಬ್ಬ ವ್ಯಕ್ತಿ ಹೇಳಿದಂತೆ ಹೇಗೆ ನಡೆಯೋದು. ನಾವೂ ಜನಾರ್ದನ ರೆಡ್ಡಿ ಅವರಿಗೂ ಒಳ್ಳಯದೆ ಆಗಲಿ ಎಂದು ಬಯಸಿದವರು. ಅವರಿಗೆ ಯಾವತ್ತು ಕೆಟ್ಟದು ಬಯಸಿಲ್ಲ. ಆದರೆ ಜನಾರ್ದನ ರೆಡ್ಡಿ ಅವರು ನಮ್ಮ ಬಗ್ಗೆ ಕೆಟ್ಟದಾಗಿ ಯಾಕೆ ಮಾತಾಡ್ತಾ ಇದಾರೆ ಗೊತ್ತಿಲ್ಲ. ನಮ್ಮ ಹಿರಿಯರು ಸಹ ಯಾರೂ ಸತ್ಯವಂತರು, ಅಲ್ಲ ಎಂಬುದನ್ನು ತಿಳಿಸುಕೊಳ್ಳವೇಕಿತ್ತು ಎಂದು ಬೇಸರ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...