ಇತ್ತೀಚೆಗಂತು ಕ್ರಿಕೆಟ್ ಅಂಗಳ ಹಾಗೂ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಡಿವೋರ್ಸ್ ಕೇಸ್ ಗಳು ಸದ್ದು ಮಾಡುತ್ತಿವೆ. ಇದೀಗ ಭಾರತೀಯ ಕ್ರಿಕೆಟ್ ದಂತಕಥೆ ವಿರೇಂದ್ರ ಸೆಹ್ವಾಗ್ ಡಿವೋರ್ಸ್ ವಿಚಾರ ಸದ್ದು ಮಾಡುತ್ತಿದೆ. 20 ವರ್ಷಗಳ ದಾಂಪತ್ಯ ಜೀವನದ ಬಳಿಲ ಸೆಹ್ವಾಗ್ ಹಾಗೂ ಆರತಿ ಅಹ್ಲಾವತ್ ಬೇರೆ ಬೇರೆ ಆಗ್ತಿದ್ದಾರೆ ಎನ್ನಲಾಗಿದೆ. ಇವರಿಬ್ಬರದ್ದು ಲವ್ ಮ್ಯಾರೇಜ್. ಇದೀಗ ಆ ಪ್ರೀತಿಯ ಬಂಧವನ್ನ ಬಿಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

2000ನೇ ಇಸವಿಯ ಆರಂಭದಲ್ಲಿ ಸೆಹ್ವಾಗ್ ಮತ್ತು ಆರತಿ ನಡುವೆ ಪ್ರೀತಿ-ಪ್ರೇಮ ಚಿಗುರೊಡೆದಿತ್ತು. ಮನೆಯವರನ್ನೆಲ್ಲ ಒಪ್ಪಿಸಿ ಅದ್ದೂರಿಯಾಗಿಯೇ ಇಬ್ಬರು ಮದುವೆಯಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಹಿರಿಯ ಪುತ್ರ ಆರ್ಯವೀರ್ ಜನಿಸಿದ್ರೆ, 2010ರಲ್ಲಿ 2ನೇ ಪುತ್ರ ವೇದಾಂತ್ ಜನಿಸಿದ್ದ. ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ ಇತ್ತೀಚಿನ ಬೆಳವಣಿಗೆಗಳಯ ಇವರಿಬ್ಬರ ನಡುವಿನ ಅಂತರ ದೊಡ್ಡಮಟ್ಟದಲ್ಲಿಯೇ ಹೆಚ್ಚಾಗಿದೆಯಂತೆ. ಹೀಗಾಗಿ ಡಿವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಆಪ್ತ ಮೂಲಗಳ ಪ್ರಕಾರ ಹಲವು ತಿಂಗಳಿನಿಂದ ಇಬ್ಬರು ಬೇರೆ ಬೇರೆಯಾಗಿಯೇ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಒಂದು ಕಾಲದಲ್ಲಿ ಸೆಹ್ವಾಗ್ ಹಾಗೂ ಆರತಿ ಅವರನ್ನ ಪರ್ಫೆಕ್ಟ್ ಜೋಡಿ ಎಂದೇ ನೋಡಲಾಗುತ್ತಿತ್ತು. ಆದರೆ ಈಗ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಇಬ್ಬರೂ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಆ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ವತ್ಷದ ದೀಪಾವಳಿ ಸಂಭ್ರಮದಲ್ಲಿ ವಿರೇಂದ್ರ ಸೆಹ್ವಾಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದರು. ಅದರಲ್ಲಿ ತಮ್ಮಿಬ್ಬರು ಮಕ್ಕಳು ಹಾಗೂ ತಾಯಿ ಮಾತ್ರ ಇದ್ದರು. ಆದರೆ ಆರತಿ ಎಲ್ಲಿಯೂ ಕಂಡಿರಲಿಲ್ಲ.

