ಬೆಂಗಳೂರು: ಪಿಎಸ್ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಸಂಬಂಧಪಟ್ಟ ಹಲವರನ್ನು ಅರೆಸ್ಟ್ ಮಾಡಲಾಗಿದೆ. ಆದರೆ ದಿನದಿಂದ ದಿನಕ್ಕೆ ಹಲವು ತಿರುವು ಪಡೆಯುತ್ತಿದೆ. ಇದೀಗ ಈ ಪ್ರಕರಣದಲ್ಲಿ ಮಾಜಿ ಸಿಎಂ ಮಗನ ಹೆಸರೊಂದು ತಳುಕು ಹಾಕಿದೆ.
ಇಂದು ಸಿಐಡಿಗೆ ವಕೀಲರಿಂದ ದೂರು ದಾಖಲಾಗಿದೆ. ದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಮಗನ ವಿರುದ್ದವೂ ಸೇರಿಸಲಾಗಿದೆ. ಆದರೆ ಅಲ್ಲಿ ಹೆಸರು ಸೇರಿಸಿಲ್ಲ. ಮಾಜಿ ಮುಖ್ಯಮಂತ್ರಿಯ ಮಗ ಕೂಡ ಪರೀಕ್ಷೆಯ ಹಗರಣದಲ್ಲಿ ಭಾಗಿಯಾಗಿದ್ದಾನೆಂದು ರಾಜ್ಯಾದ್ಯಂತ ಪರೀಕ್ಷೆ ಬರೆದ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ಆ ಮಾಜಿ ಸಿಎಂ ಮಗನನ್ನು ಕರೆತಂದು ವಿಚಾರಣೆ ನಡೆಸಬೇಕೆಂದು ದೂರು ನೀಡಿದ ವಕೀಲರು ಒತ್ತಾಯಿಸಿದ್ದಾರೆ.
ಇನ್ನು ವಿಚಾರಣೆಯಲ್ಲಿ ದೊಡ್ಡ ದೊಡ್ಡವರನ್ನು ಕರೆಸಿಲ್ಲ. ಈಗಾಗಲೇ ರಾಜ್ಯದ ಪ್ರಭಾವಿ ಸಚಿವ ಅಶ್ವತ್ಥ್ ನಾರಾಯಣ್, ಪೊಲೀಸ್ ಅಧಿಕಾರಿ ಅಮೃತಾ ಪಾಲ್ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿದೆ. ಆದರೆ ಯಾರನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಇದಕ್ಕೆ ಸಂಬಂಧಿಸಿದವರನ್ನು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.