ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನ. 24 : ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶ ಬರಬೇಖಾದರೆ ಎಲ್ಲರ ಪರಿಶ್ರಮ ಅಗತ್ಯವಾಗಿದೆ. ಇಲ್ಲಿ ಒಬ್ಬರು ಮಾಡುವುದು ಮ್ತತೊಬ್ಬರು ಸುಮ್ಮನೆ ಇರುವುದು ಆದರೆ ಆಗುವುದಿಲ್ಲ. ಎಲ್ಲರೂ ಸೇರಿ ಸತತವಾಗಿ ಪರಿಶ್ರಮವನ್ನು ಹಾಕಿದಾಗ ಮಾತ್ರ ಮುಂದಿನ ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶ ಬರಲು ಸಾಧ್ಯವಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕರಾದ ಆರ್.ಪುಟ್ಟಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಿ.ಎನ್.ಸಿ.(ಚಿನ್ಮೂಲಾದ್ರಿ) ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ, ಇತಿಹಾಸ ವೇದಿಕೆ ಮತ್ತು ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಇದರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಇತಿಹಾಸ ವಿಷಯದ ಬಗ್ಗೆ ಪ್ರಶ್ನೆ ಪತ್ರಿಕೆ ಮತ್ತು ನೀಲ ನಕ್ಷೆ ತಯಾರಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಪರೀಕ್ಷಾ ಪದ್ದತಿಯನ್ನು ಬದಲಾವಣೆ ಮಾಡಿದೆ ಇದರ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.
ಈ ಹಿನ್ನಲೆಯಲ್ಲಿ 80 ಅಂಕಗಳು ಪ್ರಶ್ನೆ ಪತ್ರಿಕೆಗೆ ಉಳಿದ 20 ಅಂಕಗಳನ್ನು ಆಂತರಿಕವಾಗಿ ನೀಡಲಾಗವುದು ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಉತ್ತೀರ್ಣರಾಗಬಹುದಾಗಿದೆ. ನಿಮ್ಮ ಸಮಸ್ಯೆಗಳಿಗೆ ಈ ಕಾರ್ಯಗಾರದಲ್ಲಿ ಉತ್ತರವನ್ನು ಕಂಡುಕೊಳ್ಳುವುದರ ಮೂಲಕ ನಿಮ್ಮ ಮುಂದಿನ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಿ ಎಂದು ಸಲಹೆ ನೀಡಿದರು.
ನಾವುಗಳು ದಿನ ನಿತ್ಯದಲ್ಲಿ ಆಗುವಂತ ವಿವಿಧ ರೀತಿಯ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಿದೆ. ಇದರಿಂದ ಮಾತ್ರ ಉತ್ತಮವಾದ ಫಲಿತಾಂಶ ಲಭ್ಯವಾಗಲು ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ತಯಾರಾಗಲು ತಿಳಿ ಹೇಳಬೇಕಿದೆ.
ಒಂದು ಉತ್ತಮವಾದ ಫಲಿತಾಂಶ ಬರಲು ಎಲ್ಲರ ಪರಿಶ್ರಮ ಅಗತ್ಯವಾಗಿದೆ ಇಲ್ಲಿ ಒಬ್ಬರು ಮಾತ್ರ ಪರಿಶ್ರಮ ಹಾಕಲು ಸಾಕಾಗುವುದಿಲ್ಲ, ಎಲ್ಲರು ಒಟ್ಟಾಗಿ ಪರಿಶ್ರಮವನ್ನು ಹಾಕಿದಾಗ ಮಾತ್ರ ಉತ್ತಮವಾದ ಫಲಿತಾಂಶ ಲಭ್ಯವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ನೇರ ದಾರಿಯಲ್ಲಿ ಎದುರಿಸುವಂತೆ ಧೈರ್ಯವನ್ನು ತುಂಬುವ ಕಾರ್ಯವನ್ನು ಉಪನ್ಯಾಸಕರು ಮಾಡಬೇಕಿದೆ. ಆದು ಬಿಟ್ಟು ಪರಿಕ್ಷೆಯಲ್ಲಿ ಅಡ್ಡ ದಾರಿಯನ್ನು ಹಿಡಿಯುವಂತ ಕಾರ್ಯವನ್ನು ಮಾಡದಂತೆ ಎಚ್ಚರದಿಂದ ನೋಡಿಕೊಳ್ಳಬೇಕಿದೆ.
ಸರ್ಕಾರ ಬದಲಾಯಿಸಿರುವ ಪರೀಕ್ಷಾ ಪದ್ದತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಅವರನ್ನು ಪರೀಕ್ಷಗೆ ಸನ್ನದ್ದರನ್ನಾಗಿ ಮಾಡಬೇಕಿದೆ. ಪರೀಕ್ಷೆಯಲ್ಲಿ ಉಪನ್ಯಾಸಕರಾದವರು ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಗೆ ಮುನ್ನಡೆಯ ಬೇಕಿದೆ. ಇದರಿಂದ ಉತ್ತಮವಾದ ಫಲಿತಾಂಶ ಬರಲು ಸಾಧ್ಯವಿದೆ ಎಂದು ಆರ್.ಪುಟ್ಟಸ್ವಾಮಿ ತಿಳಿಸಿದರು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶಪ್ಪ ಮಾತನಾಡಿ, ಸರ್ಕಾರ ಪರೀಕ್ಷಗೆ ಸಂಬಂಧಪಟ್ಟಂತೆ ಬದಲಾವಣೆ ಮಾಡಿದೆ ಇದನ್ನು ಉಪನ್ಯಾಸಕರಿಗೆ ತಿಳಿಸುವ ಕಾರ್ಯವನ್ನು ವೇದಿಕೆಗಳು ಮಾಡುತ್ತಿದೆ. ಉಪನ್ಯಾಸಕರ ಗೊಂದಲಗಳಿಗೆ ಪರಿಹಾರವನ್ನು ನೀಡುವ ಕಾರ್ಯವನ್ನು ಈ ರೀತಿಯ ಕಾರ್ಯಗಾರದ ಮೂಲಕ ಮಾಡಲಾಗುತ್ತಿದೆ.
ಉಪನ್ಯಾಸಕರುಗಳು ಕಾಲೇಜುಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳತ್ತ ಹೆಚ್ಚಿನ ಗಮನವನ್ನು ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರ ತರುವ ಕಾರ್ಯವನ್ನು ಮಾಡಬೇಕಿದೆ. ಹಿಂದಿನ ವರ್ಷ ಚಿತ್ರದುರ್ಗದ ಫಲಿತಾಂಶ ಅತಿ ಕಳಪೆಯಾಗಿತ್ತು ಆದರೆ ಈ ಬಾರಿ ಅದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ ಇದಕ್ಕೆ ಎಲ್ಲಾ ವಿಷಯವಾರು ವೇದಿಕೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಸರ್ಕಾರ ನಮ್ಮ ಇಲಾಖೆಯನ್ನು ಜಿ.ಪಂ.ವ್ಯಾಪ್ತಿಗೆ ತರುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ ಇದರ ವಿರುದ್ದ ಹೋರಾಟ ಪ್ರಾರಂಭವಾಗಿದೆ ಸರ್ಕಾರ ತನ್ನ ಸುತ್ತೋಲೆಯನ್ನು ವಾಪಾಸ್ಸು ಪಡೆಯುವವರೆಗೂ ಸಹಾ ನಮ್ಮ ಹೋರಾಟ ನಡೆಯಲಿದೆ ಇದಕ್ಕೆ ಉಪನ್ಯಾಸಕರ ಬೆಂಬಲ ಅಗತ್ಯವಾಗಿದೆ ಎಂದು ಮಲ್ಲೇಶ್‍ಪ್ಪ ತಿಳಿಸಿದರು.
ಕಾರ್ಯಗಾರದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ರಂಗಪ್ಪ ಎಲ್, ಇತಿಹಾಸ ವೇದಿಕೆಯ ಗೌರವಾಧ್ಯಕ್ಷರಾದ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಮುಸ್ತಪ, ಕಾರ್ಯಾದ್ಯಕ್ಷರಾದ ಎಂ.ಶ್ರೀನಿವಾಸ್ ಸಿ.ಎನ್.ಸಿ.(ಚಿನ್ಮೂಲಾದ್ರಿ) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ವೇದಿಕೆಯ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ ವಹಿಸಿದ್ದರು. ಶಿರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹೆಚ್.ವಿ.ತಿಮ್ಮರಾಜು ಪ್ರಶ್ನೆ ಪತ್ರಿಕೆ ಮತ್ತು ನೀಲನಕ್ಷೆ ತಯಾರಿಕೆಯ ಬಗ್ಗೆ ತಿಳಿಸಿ ಕೊಟ್ಟರು. ಶ್ರೀಮತಿ ಪುಷ್ಟ ಪ್ರಾರ್ಥಿಸಿದರೆ, ಮೈಲಾಲಿಂಗಮ್ಮ ಸ್ವಾಗತಿಸಿದರು, ಡಾ.ಬಿ.ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.