ಯೋಧರ ಶಿಸ್ತು, ಏಕಾಗ್ರತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು‌ : ಕೆ.ಪಿ.ಎಂ.ಗಣೇಶಯ್ಯ

1 Min Read

 

ಸುದ್ದಿಒನ್, ಚಿತ್ರದುರ್ಗ, (ಜು.30): ಯೋಧರ ಶಿಸ್ತು, ಏಕಾಗ್ರತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ದೇಶದ ಗಡಿ ಕಾಯಲು ಯೋಧನಿದ್ದರೆ, ಮನೆ ಮತ್ತು ಸಮಾಜವನ್ನು ಮುನ್ನೆಡೆಸುವ ಜವಾಬ್ದಾರಿ ಪ್ರತಿ ಮನುಷ್ಯನ ಕರ್ತವ್ಯವಾಗಿರುತ್ತದೆ ಎಂದು ರಂಗನಿರ್ದೇಶಕ ಹಾಗೂ ಕಸಾಪ ಜಿಲ್ಲಾ ಗೌ.ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಅಭಿಪ್ರಾಯಪಟ್ಟರು.

ನಗರದ ವಿದ್ಯಾವಿಕಾಸ ಶಾಲೆಯ ಆವರಣರದಲ್ಲಿ ಚಿನ್ಮಯ ಮಯೂರ ಯೋಗ ಕ್ರೀಡಾ ಸಂಸ್ಥೆಯು ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದ ಯೋಧ ನಮನ ಕಾರ್ಯಕ್ರಮದಲ್ಲಿ ವಿಶೇಷಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.

ಯೋಧರು ಗಡಿ ಕಾಯುವ ಮುನ್ನ ಮಾನಸಿಕ ಮತ್ತು ದೈಹಿಕವಾಗಿ ಹಲವು ರೀತಿಯ ಕಸರತ್ತುಗಳನ್ನು ನಡೆಸುತ್ತಾರೆ. ಅಂತೆಯೇ ಒಂದು ಕುಟುಂಬ ಮತ್ತು ಸಮಾಜವನ್ನು ಪ್ರತಿನಿಧಿಸುವ ವ್ಯಕ್ತಿ ಅದೂ ಹೆಣ್ಣಾಗಿರಲಿ, ಗಂಡಾಗಿರಲಿ ತನ್ನ ಜವಾಬ್ದಾರಿಯನ್ನು ಅರಿತು ನಿಷ್ಠೆಯ ಬದುಕನ್ನು ಸಾಗಿಸಬೇಕಾಗುತ್ತದೆ. ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಯೋಗ ತರಬೇತಿಯನ್ನು ಪಡೆಯಬೇಕಾಗುತ್ತದೆ. ಶಾಂತಿ ನೆಮ್ಮದಿಯನ್ನು ಯೋಗದಿಂದ ಗಳಿಸಬಹುದು ಎಂದರು.

ನಿವೃತ್ತ ಉಪನ್ಯಾಸಕಿ ಶಾರದ ವೆಂಕಟೇಶರೆಡ್ಡಿ ಇವರು ಯೋಧರ ತ್ಯಾಗ ಬಲಿದಾನಗಳ ಕಾರ್ಗಿಲ್ ವಿಜಯದಿವಸ್ ಬಗ್ಗೆ ನೆನಪು ಮಾಡಿಕೊಂಡು ಯೋಧರಿಗೆ ನಮನ ಸಲ್ಲಿಸಿದರು. ಗುಡ್ಡದರಂಗವ್ವನಹಳ್ಳಿಯ ನಿವೃತ್ತ ಸೈನಿಕ ಪಿ.ಆರ್.ಶ್ರೀನಿವಾಸ್ ರೆಡ್ಡಿ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಚಿನ್ಮಯ ಮಯೂರ ಯೋಗ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನುಸೂಯ ತಿಮ್ಮಾರೆಡ್ಡಿ ಸ್ವಾಗತಿಸಿದರು, ಕುಮಾರಿ ನಾಗಸಾರಿಕಾ ಪ್ರಾರ್ಥಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಬಿ.ಮುರುಳಿ ವಂದಿಸಿದರು. ಯೋಗ ಶಿಕ್ಷಕಿ ಎಸ್.ಕೆ.ಸುನಿತ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *