Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಿ ವರ್ಷ ಕೋಟೆಯೊಳಗೆ ದುರ್ಗೋತ್ಸವ ಆಚರಿಸಬೇಕು : ಬಿ.ಕಾಂತರಾಜ್

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ

ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ಹಂಪಿಯಲ್ಲಿ ಪ್ರತಿವರ್ಷವೂ ಶ್ರೀಕೃಷ್ಣದೇವರಾಯ ಜಯಂತಿ ಆಚರಿಸಿದಂತೆ ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ದುರ್ಗೋತ್ಸವ ಆಚರಿಸಿದರೆ ಅಲ್ಲಿ ಮದಕರಿನಾಯಕನ ಆಳ್ವಿಕೆಯನ್ನು ಸ್ಮರಿಸಬಹುದೆಂದು ನಗರಸಭೆ ಮಾಜಿ ಅಧ್ಯಕ್ಷ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಒತ್ತಾಯಿಸಿದರು.

ಚಿತ್ರದುರ್ಗದ ಅರಸ ನಾಡದೊರೆ ಮದಕರಿನಾಯಕ ಜಯಂತಿ ಅಂಗವಾಗಿ ಗುರುವಾರ ಮದಕರಿನಾಯಕನ ಪ್ರತಿಮೆಗೆ ಜಿಲ್ಲಾ ನಾಯಕ ಸಮಾಜದಿಂದ ಮಾಲಾರ್ಪಣೆ ಮಾಡಿ ನಂತರ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೇ.7.5 ಮೀಸಲಾತಿಗಾಗಿ ನಮ್ಮ ಜನಾಂಗದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 241 ದಿನಗಳ ಕಾಲ ಧರಣಿ ಕುಳಿತಿದ್ದ ಕಾರಣಕ್ಕಾಗಿ ಮದಕರಿನಾಯಕನ ಜಯಂತಿಯನ್ನು ಸರಳವಾಗಿ ಆಚರಿಸಬೇಕಾಯಿತು. ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಅಲ್ಲಿ ನಮ್ಮ ಸಮಸ್ಯೆ ತೊಡಕುಗಳ ಕುರಿತು ಚರ್ಚಿಸಲು ಅವಕಾಶವಿರುವುದಿಲ್ಲ. ಹಾಗಾಗಿ ಪ್ರತಿ ವರ್ಷ ಕೋಟೆಯೊಳಗೆ ದುರ್ಗೋತ್ಸವ ಆಚರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸುಮ್ಮನೆ ಕುಳಿತರೆ ಯಾವುದೂ ನೆರವೇರುವುದಿಲ್ಲ. ಮುಂದೆ ವಾಲ್ಮೀಕಿ ಜಯಂತಿ ಹಾಗೂ ಮದಕರಿನಾಯಕನ ಜಯಂತಿಯನ್ನು ಖಾಸಗಿಯಾಗಿ ಎಲ್ಲಾ ಸಮುದಾಯದವರ ಜೊತೆಗೆ ಸೇರಿ ಆಚರಿಸೋಣ ಎಂದು ಹೇಳಿದರು.

ಬಿಜೆಪಿ.ಯುವ ಮುಖಂಡ ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ಸರ್ಕಾರ ಕೆಲಸ ಮಾಡಿದೆ. ಮುಂದಿನ ವರ್ಷದಿಂದ ಮದಕರಿನಾಯಕನ ಜಯಂತಿಯನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಬೇಕು. ಅದಕ್ಕೆ ನಮ್ಮ ಸಹಕಾರವಿರುತ್ತದೆ ಎಂದು ಭರವಸೆ ನೀಡಿದರು.

ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್ ಮಾತನಾಡುತ್ತ ಆಂಧ್ರದ ಕಲ್ಯಾಣದುರ್ಗ, ಅನಂತಪುರ, ರಾಯದುರ್ಗದಲ್ಲಿ ಪ್ರತಿ ಮನೆ ಮನೆಗಳಲ್ಲಿಯೂ ಮದಕರಿನಾಯಕನ ಫೋಟೋ ಇಟ್ಟುಕೊಂಡಿದ್ದಾರೆ. ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ಆಳಿದ ರಾಜಾವೀರ ಮದಕರಿನಾಯಕನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.

ಪಾಪೇಶನಾಯಕ ಮಾತನಾಡಿ ಶೌರ್ಯ, ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದ ರಾಜಾವೀರ ಮದಕರಿನಾಯಕನಿಗೆ ಹದಿನಾಲ್ಕು ವರ್ಷಕ್ಕೆ ಪಟ್ಟಾಭಿಷೇಕವಾಯಿತು. ಮುಂದಿನ ಪೀಳಿಗೆಯವರು ಮದಕರಿನಾಯಕನ ಇತಿಹಾಸವನ್ನು ತಿಳಿದುಕೊಂಡು ಜಯಂತಿಯನ್ನು ಆಚರಿಸುವಂತಾಗಬೇಕು. ನಾಯಕ ಸಮಾಜದವರು ಒಗ್ಗಟ್ಟಾಗಿ ಸರ್ಕಾರದಿಂದ ಮದಕರಿನಾಯಕ ಜಯಂತಿ ಆಚರಿಸುವಂತೆ ಒತ್ತಾಯಿಸಬೇಕಾಗಿದೆ ಎಂದು ಹೇಳಿದರು.

ನಾಯಕ ನೌಕರರ ಸಂಘದ ಅಧ್ಯಕ್ಷ ಸದಾಶಿವಪ್ಪ ಮಾತನಾಡುತ್ತ ಚಿತ್ರದುರ್ಗದ ಪಾಳೆಯಪಟ್ಟದಲ್ಲಿ 12 ರಾಜರು ಆಳ್ವಿಕೆ ನಡೆಸಿದ್ದಾರೆ. ಸಾವಿರಾರು ಸೈನಿಕರನ್ನಿಟ್ಟುಕೊಂಡು ಕೋಟೆಯನ್ನು ರಕ್ಷಿಸಿದ್ದಾರೆ. ನಮ್ಮ ಜನಾಂಗಕ್ಕೆ ಸ್ವಾಮೀಜಿಯಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ಮದಕರಿನಾಯಕನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ನುಡಿದರು.

ವದ್ದಿಕೆರೆ ರಮೇಶ್ ಮಾತನಾಡಿ ರಾಜಾವೀರ ಮದಕರಿನಾಯಕ ಚಿತ್ರದುರ್ಗದ ಕೋಟೆಯಲ್ಲಿ ಅರ್ಥಪೂರ್ಣ ಆಳ್ವಿಕೆ ಮಾಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕೆರೆಕಟ್ಟೆಗಳನ್ನು ಕಟ್ಟಿಸಿ ಸಕಲ ಜೀವರಾಶಿಗಳಿಗೂ ಬಾಯಾರಿಕೆಯ ದಣಿವಾರಿಸಿದ್ದಾರೆ. ಮದಕರಿನಾಯಕ ನಾಯಕ ಜನಾಂಗಕ್ಕೆ ಸೇರಿದ್ದರೂ ಎಲ್ಲಾ ಜಾತಿಯವರನ್ನು ಕಟ್ಟಿಕೊಂಡು ರಾಜ್ಯಭಾರ ನಡೆಸಿದ್ದಾರೆಂದು ಸ್ಮರಿಸಿದರು.

ನಾಯಕ ಸಮಾಜದ ಮುಖಂಡ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಮುಂದಿನ ವರ್ಷ ಮದಕರಿನಾಯಕ ಜಯಂತಿಯನ್ನು ಅತ್ಯಂತ ವೈಭವವಾಗಿ ಆಚರಿಸೋಣ. ಕೋಟೆ ಮುಂಭಾಗದಿಂದ ಮೆರವಣಿಗೆ ಹೊರಡಬೇಕು. ಮದಕರಿನಾಯಕ ಕೇವಲ ಚಿತ್ರದುರ್ಗಕ್ಕೆ ಸೀಮಿತವಲ್ಲ. ವಿಶ್ವಕ್ಕೆ ಹೆಸರುವಾಸಿಯಾದವರು. ಕೋಟೆ, ಕೊತ್ತಲ, ಕೆರೆಗಳನ್ನು ಕಟ್ಟಿಸಿರುವ ಕೀರ್ತಿ ಅವರಿಗೆ ಸಲ್ಲಬೇಕು. ಬೇರೆ ಸಮುದಾಯದವರನ್ನು ಜೊತೆಗೆ ಕರೆದುಕೊಂಡು ನಾಡಹಬ್ಬದ ರೀತಿಯಲ್ಲಿ ಆಚರಿಸೋಣ. ತ.ರಾ.ಸು. ಬಿ.ಎಲ್.ವೇಣು, ಡಿ.ಬೋರಪ್ಪ, ಡಾ.ರಾಮಚಂದ್ರನಾಯಕ, ನಗರಸಭೆ ಮಾಜಿ ಸದಸ್ಯ ಕೆ.ನಾಗರಾಜ್ ಇನ್ನು ಅನೇಕ ಮಹನೀಯರು ಮದಕರಿನಾಯಕನ ಕಂಚಿನ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ್ದಾರೆಂದು ನೆನಪಿಸಿಕೊಂಡರು.

ನಗರಸಭೆ ಸದಸ್ಯ ವೆಂಕಟೇಶ್, ಸೂರಪ್ಪ, ಸೋಮೇಂದ್ರ, ಮಾರುತಿ ಸಲ್ಫಯ್ಯ, ಸಿರುವಲ್ಲಪ್ಪ, ನಗರಸಭೆ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಶ್ರೀಮತಿ ಕವನ ರಾಘವೇಂದ್ರ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ಹೊಸಹಟ್ಟಿ ಓಬಳೇಶ್, ಮಲ್ಲಿಕಾರ್ಜುನ್, ಕಾಟಿಹಳ್ಳಿ ಕರಿಯಪ್ಪ ಸೇರಿದಂತೆ ನಾಯಕ ಜನಾಂಗದ ಅನೇಕರು ಜಯಂತಿಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬದುಕಿನಲ್ಲಿ ರಂಗಭೂಮಿ ಉತ್ತಮ ಮಾರ್ಗದರ್ಶನ ನೀಡುತ್ತದೆ : ಡಾ.ಬಸವಕುಮಾರ ಸ್ವಾಮೀಜಿ

    ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22: ಜೀವನ ಒಂದು ನಾಟಕರಂಗ ನಾವುಗಳು ಅದರ ಪಾತ್ರಧಾರಿಗಳು. ಬದುಕಿನಲ್ಲಿ ನಾನಾ ಕಷ್ಟಸುಖಗಳು ಬರುತ್ತವೆ. ಅದಕ್ಕೆಲ್ಲಾ ಉತ್ತಮ ಮಾರ್ಗದರ್ಶನ ನೀಡುವುದು ರಂಗಭೂಮಿ ಮಾತ್ರ ಎಂದು ಎಸ್.ಜೆ.ಎಮ್. ವಿದ್ಯಾಪೀಠದ

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

error: Content is protected !!