ದಿನನಿತ್ಯವೂ ಕನ್ನಡದ ಹಬ್ಬವಾಗಬೇಕು :  ಕೆ.ಎಂ.ಶಿವಸ್ವಾಮಿ

2 Min Read

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ, (ನ.26): ಕನ್ನಡ ಎಂದರೆ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ದಿನನಿತ್ಯವೂ ಕನ್ನಡದ ಹಬ್ಬವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಆದರ್ಶ ಯುವಕ/ಯುವತಿ ಸಂಘ, ರೋಟರಿ ಕ್ಲಬ್ ಚಿನ್ಮುಲಾದ್ರಿ ವತಿಯಿಂದ ರೋಟರಿ ಬಾಲಭವನದಲ್ಲಿ ಶುಕ್ರವಾರ ನಡೆದ ಸಾಂಸ್ಕøತಿಕ ಸೊಬಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಅತ್ಯಂತ ಶ್ರೇಷ್ಠವಾದ ಭಾಷೆ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಕಲೆ, ಸಂಸ್ಕೃತಿಯನ್ನು ಆಳಗೊಳಿಸಬೇಕು. ಮಹಾನ್ ಕವಿಗಳು ಕನ್ನಡ ಸಾಹಿತ್ಯ ಪರಿಷತ್‍ಗೆ ಸೇವೆ ಸಲ್ಲಿಸಿದ್ದಾರೆ. ಕನ್ನಡ ಬಳಕೆ ಹೆಚ್ಚಾದರೆ ಬಾಳಿಕೆ ಬರುತ್ತದೆ. ಎಲ್ಲಾ ಭಾಷೆಗಳನ್ನು ಕಲಿಯುವ ಅನಿವಾರ್ಯತೆಯಿದೆ. ಶ್ರೀಮಂತ ಭಾಷೆಯಾಗಿರುವ ಕನ್ನಡ ಪದಗಳನ್ನು ಎಲ್ಲರೂ ಬಳಸಿ ಉಳಿಸೋಣ ಎಂದು ಮನವಿ ಮಾಡಿದರು.

ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷ ರೊ.ಈ.ಅರುಣ್‍ಕುಮಾರ್ ಮಾತನಾಡಿ ಹುಟ್ಟುಹಬ್ಬ ವಿವಾಹ ವಾರ್ಷಿಕೋತ್ಸವವನ್ನು ಎಲ್ಲರೂ ಅದ್ದೂರಿಯಾಗಿ ಆಚರಿಸಿಕೊಳ್ಳುವುದು ಸಹಜ. ಆದರೆ ನಮ್ಮ ಹತ್ತನೆ ವರ್ಷದ ವಿವಾಹ ವಾರ್ಷಿಕೋತ್ಸವದಂದು ಮಾಳಪ್ಪನಹಟ್ಟಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಮೀಸಲಾಗಬಾರದು. ಒಂದು ತಿಂಗಳಾದರೂ ಕನ್ನಡದ ಧ್ವಜ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಹಾರಾಡುವಂತಾಗಬೇಕೆಂದು ಹೇಳಿದರು.

2025-26 ನೇ ಸಾಲಿನ ರೋಟರಿ 3160 ಡಿಸ್ಟ್ರಿಕ್ಟ್ ಗೌರ್ವನರ್ ಆಗಿ ನೇಮಕಗೊಂಡಿರುವ ರೊ.ಎಂ.ಕೆ.ರವೀಂದ್ರ ಮಾತನಾಡಿ 1905, ಫೆ.23 ರಂದು ಅಮೇರಿಕಾದಲ್ಲಿ ನಾಲ್ವರಿಂದ ಆರಂಭಗೊಂಡ ರೋಟರಿ ಸಂಸ್ಥೆ 117 ವರ್ಷಗಳಿಂದ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದೆ. ವಿಶ್ವದಲ್ಲಿ 35 ಸಾವಿರಕ್ಕೂ ಅಧಿಕ ಸಂಸ್ಥೆಗಳಿವೆ. 2800 ಸದಸ್ಯರುಗಳು ಜಿಲ್ಲೆಯಲ್ಲಿದ್ದಾರೆ.

ಪ್ರಪಂಚದಲ್ಲಿ ಹದಿಮೂರು ಲಕ್ಷ ಸದಸ್ಯರಿದ್ದು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಾ ಹಿಂದಿನಿಂದಲೂ ಪೋಲಿಯೋ ನಿರ್ಮೂಲನೆಗಾಗಿ ಹೋರಾಡುತ್ತಿರುವ ಫಲವಾಗಿ 2011 ರಿಂದ ಈಚೆಗೆ ಭಾರತದಲ್ಲಿ ಪೋಲಿಯೋ ದಾಖಲೆಯಾಗಿಲ್ಲ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಇವರುಗಳು ಮಾತನಾಡಿದರು.

ರೋಟರಿ ಅಸಿಸ್ಟೆಂಟ್ ಗೌರ್ವನರ್ ಗಾಯತ್ರಿಶಿವರಾಂ, ರೋಟರಿ ಕ್ಲಬ್ ಚಿನ್ಮುಲಾದ್ರಿ ಕಾರ್ಯದರ್ಶಿ ಶ್ರೀನಿವಾಸ್ ಮಳಲಿ, ಜಾನಪದ ಹಾಡುಗಾರ ಕಾಲ್ಕೆರೆ ಚಂದ್ರಪ್ಪ, ಶ್ರೀಮತಿ ಸುಚಿತ್ರ ಈ.ಅರುಣ್‍ಕುಮಾರ್, ಆದರ್ಶ ಯುವಕ/ಯುವತಿ ಸಂಘದ ಕಾರ್ಯದರ್ಶಿ ಓಂಕಾರಮ್ಮ ವೇದಿಕೆಯಲ್ಲಿದ್ದರು.

ಹರೀಶ್, ಗಂಗಾಧರ್, ಚಂದ್ರಪ್ಪ ಕಾಲ್ಕೆರೆ, ಹಿಮಂತ್‍ರಾಜ್ ಇವರುಗಳು ಜಾನಪದ, ತತ್ವಪದಗಳನ್ನು ಹಾಡಿದರು. ಭರತನಾಟ್ಯ ಪ್ರದರ್ಶಿಸಲಾಯಿತು. ಸುಗಮ ಸಂಗೀತವನ್ನು ಹಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *