ಶಾಸಕನಾಗಿದ್ದರೂ ನನ್ನ ದೇಹ ಬಿಜೆಪಿಯಲ್ಲಿತ್ತು, ಮನಸ್ಸು ಮಾತ್ರ ಕಾಂಗ್ರೆಸ್‍ನಲ್ಲಿತ್ತು : ಶಾಸಕ ಎನ್.ವೈ.ಗೋಪಾಲಕೃಷ್ಣ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್,ಚಿತ್ರದುರ್ಗ : ನನ್ನ ದೇಹ ಬಿಜೆಪಿಯಲ್ಲಿತ್ತು, ಮನಸ್ಸು ಮಾತ್ರ ಕಾಂಗ್ರೆಸ್‍ನಲ್ಲಿದ್ದ ಕಾರಣಕ್ಕಾಗಿ ರಾಹುಲ್‍ಗಾಂಧಿ ಭಾರತ್ ಜೋಡೋ ಪಾದಯಾತ್ರೆಗೆ ಮೊಳಕಾಲ್ಮುರುವಿನಿಂದ ಜನರನ್ನು ಕಳಿಸಿದ್ದೆ ಎಂದು ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ ತಮ್ಮ ಅಂತರಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್‍ಗಾಂಧಿ ಕಳೆದ ವರ್ಷ ಸೆ.7 ರಂದು ಆರಂಭಿಸಿದ ಭಾರತ್ ಜೋಡೋ ಪಾದಯಾತ್ರೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್‍ನಿಂದ ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ವಾರ್ಷಿಕೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವು ಅನಿವಾರ್ಯ ಕಾರಣಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿ ಕೂಡ್ಲಿಗಿಯಿಂದ ಸ್ಪರ್ಧಿಸಿ ಶಾಸಕನಾಗಿದ್ದರೂ ನನ್ನ ಮನಸ್ಸೆಲ್ಲಾ ಕಾಂಗ್ರೆಸ್ ಕಡೆಯಿತ್ತು. ಆಗ ಡಿ.ಸುಧಾಕರ್ ಕೇಳಿದ್ದರಿಂದ ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಕಳಿಸಿದ್ದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಕಾಂಗ್ರೆಸ್ ಇರುವತನಕ ಪಕ್ಷವನ್ನು ಕೈಬಿಡಲ್ಲ. ರಾಹುಲ್‍ಗಾಂಧಿ ಸ್ವಂತಕ್ಕಾಗಿ ಭಾರತ್ ಜೋಡೋ ಯಾತ್ರೆ ಮಾಡಲಿಲ್ಲ.

ಸಂವಿಧಾನದ ಮೇಲೆ ಅತಿಕ್ರಮವಾಗುತ್ತಿರುವುದನ್ನು ದೇಶದ ಜನರಿಗೆ ತಿಳಿಸಿ ಎಚ್ಚರಿಸುವುದಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೊರಟರು. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಲೋಕಸಭೆ ಚುನಾವಣೆ ಎದುರಾಗಲಿದೆ. ಈಗಿನಿಂದಲೆ ಎಲ್ಲರೂ ಒಟ್ಟಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *