ಬೆಳಗಾವಿ: ಲೋಕಸಭಾ ಚುನಾವಣೆಗಾಗಿ ಆಪರೇಷನ್ ಹಸ್ತದ ಸದ್ದು ಜೋರಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ತೊರೆದವರು ಮತ್ತೆ ಕಾಂಗ್ರೆಸ್ ಗೆ ಬರಲಿದ್ದಾರೆ ಎನ್ನಲಾಗಿದೆ. ಆದ್ರೆ ರಮೇಶ್ ಜಾರಕಿಹೊಳಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ನನ್ನ ರುಂಡ ಕೂಡ ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದಾರೆ.
ಆಪರೇಷನ್ ಹಸ್ತ ಇದು ಮಹಾನಾಯಕನ ಕುತಂತ್ರ. ಆಪರೇಷನದ ಹಸ್ತ ಮಾಡುವವರು ಮತ್ತು ಹೋಗುವವರು ಕುತಂತ್ರಿಗಳು. ನಾವೂ ಹೋಗುವಾಗ ಒಂದು ಅರ್ತ್ ಇತ್ತು. ನಮಗೆ ಆಗ ಅನ್ಯಾಯವಾಗಿತ್ತು. ಕಾಂಗ್ರೆಸ್ ನ 20-35 ಹಿರಿಯ ಶಾಸಕರು ಮುಂದಿನ ನಿರ್ಣಯ ಕೈಗೊಳ್ಳಲು ಸಭೆ ಸೇರುವವರಿದ್ದರು. ಅದನ್ನು ಮರೆಮಾಚಲು ಆಪರೇಷನ್ ಹಸ್ತ ಎಂಬ ಕುತಂತ್ರವನ್ನು ಮಹಾನಾಯಕ ಮಾಡುತ್ತಿರೋದು ಅಂತ ಆಪರೇಷನ್ ಹಸ್ತದ ಮೂಲ ಉದ್ದೇಶವನ್ನು ತಿಳಿಸಿದ್ದಾರೆ.
ನನಗೆ ಎಲ್ಲಾ ಗೊತ್ತಿದೆ. ಇದು ಆಪರೇಷನ್ ಹಸ್ತ ಅಲ್ಲ. ಆಪರೇಷನ್ ಹಸ್ತ ಅಂತ ಪೋಸ್ ಕೊಡುವ ನಾಯಕ ತಮ್ಮ ಪಕ್ಷಕ್ಕೆ ಅವಮಾನವಾಗುತ್ತೆ ಅಂತ ನಾಟಕವಾಡುತ್ತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬಳಿಕ ಎಲ್ಲರೂ ಸೇರುವವರಿದ್ದರು. ಅವರು ಬಿಜೆಪಿಗೆ ಬರುತ್ತಿದ್ದಾರೆ, ಆ ನಾಯಕರು ಹೆದರಲಿ ಎಂದು ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.