ಶಿಗ್ಗಾಂವಿಯಲ್ಲೂ ಬಿಜೆಪಿ ಅಭ್ಯರ್ಥಿಯದ್ದೇ ಗೆಲುವು : ಸಮೀಕ್ಷೆ ವರದಿಯಲ್ಲಿ ಉಲ್ಲೇಖ..!

suddionenews
1 Min Read

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಬಸವರಾಜ್ ಬೊಮ್ಮಾಯಿ ಅವರಿಂದ ತೆರವಾದ ಮೇಲೆ‌ ತಮ್ಮ ಮಗನಿಗೆ ಟಿಕೆಟ್ ಪಡೆದಿದ್ದಾರೆ. ಬಿಜೆಪಿಯಿಂದ ಭರತ್ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿದೆ. ಇದಕ್ಕೆ ಹಲವರ ವಿರೋಧವೂ ಕೇಳಿ ಬಂದಿತ್ತು. ಒಂದಷ್ಟು ಕಾರ್ಯಕರ್ತರು ಬೇಸರ ಮಾಡಿಕೊಂಡಿದ್ದರು. ಇದೆಲ್ಲದರ ನಡುವೆ ಸಮೀಕ್ಷೆಯ ವರದಿಯ ಪ್ರಕಾರ ಭರತ್ ಬೊಮ್ಮಾಯಿ ಅವರಿಗೇನೆ ಗೆಲುವು ಎಂದು ಬಿಂಬಿಸಲಾಗುತ್ತಿದೆ.

ಕಾಂಗ್ರೆಸ್ ನಿಂದ ಯಾಸೀರ್ ಅಹ್ಮದ್ ಸ್ಪರ್ಧೆ ಮಾಡಿದ್ದಾರೆ. ಭರತ್ ಬೊಮ್ಮಾಯಿ ಹಾಗೂ ಯಾಸೀರ್ ನಡುವೆ ನೆಕ್ ಟು ನೆಕ್ ಸ್ಪರ್ಧೆ ನಡೆದಿದೆ. ಕಾಂಗ್ರೆಸ್ ಕೂಡ ನಾವೇ ಗೆಲ್ಲುತ್ತೀವಿ ಎಂಬ ವಿಶ್ವಾಸದಲ್ಲಿದ್ರೆ, ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಅವರು ಕೂಡ ಮಗನ ಗೆಲುವಿನ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ P-Marq ಎಂಬ ಸಂಸ್ಥೆ ಮತದಾನೋತ್ತರ ಸಮೀಕ್ಷೆಯ ವರದಿಯನ್ನು ರಿಲೀಸ್ ಮಾಡಿದೆ. ಅದರಲ್ಲಿ ಎನ್ಡಿಎ ಅಭ್ಯರ್ಥಿಗೇನೆ ಗೆಲುವು ಎಂಬುದರ ಸೂಚನೆ ನೀಡಿದೆ.

ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಶಿಗ್ಗಾಂವಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ಜನ ಬಿಜೆಪಿಯತ್ತ ಅಂದ್ರೆ ಬಸವರಾಜ್ ಬೊಮ್ಮಾಯಿ ಅವರತ್ತ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲೂ ಅವರ ಬೆಂಬಲಿಗರು ಬೆಟ್ಟಿಂಗ್ ದಂಧೆ ಶುರು ಮಾಡಿದ್ದಾರೆ. ಅದರಲ್ಲೂ ಜೋಡೆತ್ತುಗಳನ್ನೇ ಅಡವಿಟ್ಟಿದ್ದಾರೆ. ಕಾಂಗ್ರೆಸ್ ನಿಂದ ಯಾಸೀರ್ ಕಣದಲ್ಲಿದ್ದು, ಬಿಜೆಪಿಯಿಂದ ಭರತ್ ಬೊಮ್ಮಾಯಿ ಕಣದಲ್ಲಿದ್ದಾರೆ. ಫಲಿತಾಂಶಕ್ಕೆ ಕೇವಲ 48 ಗಂಟೆಗಳಷ್ಟೇ ಬಾಕಿ ಇದ್ದು, ಜನ ಯಾರತ್ತ ಒಲವು ತೋರಿದ್ದಾರೆಂದು ನೋಡಬೇಕಿದೆ. ಕುತೂಹಲಕ್ಕೂ ಶನಿವಾರ ಮಧ್ಯಾಹ್ನದ ಒಳಗೆ ಬ್ರೆಕ್ ಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *