ಕಾಂಗ್ರೆಸ್ ಸರ್ಕಾರವೇನೋ ಉಚಿತ ಬಸ್ ಯೋಜನೆಯನ್ನು ಜಾರಿಗೆ ತಂದಿದೆ. ಕೊಟ್ಟ ಮಾತಿನಂತೆ ಇದೇ ತಿಂಗಳ 11ರಿಂದ ಬಸ್ ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ನೀಡಿದೆ. ಬಿಎಂಟಿಸಿ ಹೊರತು ಪಡಿಸಿ ಇನ್ನುಳಿದ ಬಸ್ ನಲ್ಲಿ ಪುರುಷರಿಗೆ 50% ಅವಕಾಶ ನೀಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜನ ಉಚಿತವಾಗಿ ಪಡೆಯಲು ಒಂದಷ್ಟು ಷರತ್ತುಗಳನ್ನು ನೀಡಲಾಗಿದೆ.
ಅದರಲ್ಲಿ ಬಸ್ ಸೇವೆ ಇರಬಹುದು. 11 ರಿಂದ ಶುರುವಾಗುವ ಉಚಿತ ಬಸ್ ಸೇವೆಗೆ ಸ್ಮಾರ್ಟ್ ಕಾರ್ಡ್ ಪಡೆಯಬೇಕಾದ ಅನಿವಾರ್ಯತೆ ಇದೆ. ಯೋಜನೆ ಜಾರಿಯಾದ ಮೂರು ತಿಂಗಳ ಒಳಗೆ ಈ ಸ್ಮಾರ್ಟ್ ಕಾರ್ಡ್ ಪಡೆಯಬೇಕಾಗುತ್ತದೆ. ಅದಕ್ಕೂ ಮುನ್ನ ಸರ್ಕಾರ ಸೂಚನೆ ನೀಡಿರುವ ಯಾವುದಾದರೂ ಒಂದು ಕಾರ್ಡ್ ಪಡೆದು ಉಚಿತ ಪ್ರಯಾಣ ಮಾಡಬಹುದು.
ಸೇವಾ ಸಿಂಧು ಆನ್ಲೈನ್ ಅಥವಾ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಕೆ ಮಾಡಿ ಶಕ್ತಜ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಅದರ ಜೊತೆಗೆ ಬಸ್ ನಲ್ಲಿ ಟಿಕೆಟ್ ಕೂಡ ನೀಡಲಾಗುತ್ತದೆ. ಉಚಿತ ಪ್ರಯಾಣದ ಆಧಾರದ ಮೇಲೆಯೇ ಟಿಕೆಟ್ ಅನ್ನು ನೀಡಲಾಗುತ್ತದೆ.