ಕಾಂಗ್ರೆಸ್ ಸೇರುವ ಮುನ್ನವೇ ಕಿಚ್ಚನಿಗೆ ಗಾಳ ಹಾಕುತ್ತಿರುವ ಬಿಜೆಪಿ ನಾಯಕರು..!

suddionenews
1 Min Read

ಇಂದು ಬೆಳಗ್ಗೆಯಿಂದ ಸುದೀಪ್ ರಾಜಕೀಯಕ್ಕೆ ಸೇರುತ್ತಾರೆ ಎಂಬ ಸುದ್ದಿಯೇ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸುದೀಪ್ ಜೊತೆಗೆ ನಟಿಸಿದ್ದ ರಮ್ಯಾ ಅವರನ್ನು ಕಾಂಗ್ರೆಸ್ ಈ ವಿಚಾರಕ್ಕೆ ಮುಂದೆ ಬಿಟ್ಟಿದೆ ಎಂಬ ಸುದ್ದು ಬಂದಿದ್ದೆ ತಡ, ಈಗ ಮೂರು ಪಕ್ಷಗಳು ಸುದೀಪ್ ಅವರನ್ನು ತಮ್ಮತ್ತ ಸೆಲೆಯುವುದಕ್ಕೆ ಯತ್ನಿಸುತ್ತಿವೆ.

ಸುದೀಪ್ ಮೂರು ಪಕ್ಷದಲ್ಲೂ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಿ ಸಿಎಂ ಬೊಮ್ಮಾಯಿ ಅವರೇ ಆತ್ಮೀಯರಾಗಿದ್ದಾರೆ. ಎಲ್ಲಿಯೇ ಸಿಕ್ಕಿದರೂ ಮಾಮ ಎಂದೇ ಕರೆಯುವ ಸುದೀಪ್, ಎಲ್ಲಿಯೇ ಕಂಡರೂ ದೀಪು ಎಂದು ಕರೆಯುವ ಸಿಎಂ ಬೊಮ್ಮಾಯಿ ಅವರು. ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಆಹ್ವಾನ ನೀಡುತ್ತಿದೆ ಎನ್ನುವಾಗಲೇ ಬಿಜೆಪಿ ಪಕ್ಷ ಅಲರ್ಟ್ ಆಗಿದೆ. ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ. ಅದು ಆಗದೆ ಇದ್ದಲ್ಲಿ ಸ್ಟಾರ್ ಪ್ರಚಾರಕರನ್ನಾಗಿ ಆದರೂ ಕರೆತರಲು ಸೂಚನೆ ನೀಡಿದೆ.

ಅತ್ತ ಜೆಡಿಎಸ್ ನಲ್ಲೂ ಸಾರಾ ಮಹೇಶ್ ಈ ಯತ್ನವನ್ನು ಮಾಡುತ್ತಿದ್ದಾರೆ. ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಕಿಚ್ಚ ಸುದೀಪ್ ಮನಸ್ಸು ಯಾರತ್ತ ವಾಲುತ್ತದೆ ಎಂಬುದೇ ಈಗ ಕುತೂಹಲದ ಪ್ರಶ್ನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *