Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

50 ವರ್ಷಗಳ ಹಿಂದೆಯೇ ಪಾರ್ಶ್ವನಾಥ ವಿದ್ಯಾಸಂಸ್ಥೆ ಬಡ ಮಕ್ಕಳಿಗೆ ವಿದ್ಯೆ ನೀಡುವ ಅದ್ಬುತ ಕೆಲಸ ಮಾಡುತ್ತಿದೆ : ಕೆ.ಎಸ್.ನವೀನ್

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.09  : ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ಜೈನ ಸಮುದಾಯ ಈ ಭಾಗದಲ್ಲಿ ನೆಲೆಯೂರಿ ಐವತ್ತು ವರ್ಷಗಳ ಹಿಂದೆಯೇ ಶಿಕ್ಷಣ ಸಂಸ್ಥೆ ತೆರೆದು ಬಡ ಮಕ್ಕಳಿಗೆ ವಿದ್ಯೆ ನೀಡುವ ಅದ್ಬುತ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಪಾರ್ಶ್ವನಾಥ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಐವತ್ತು ವರ್ಷಗಳ ಹಿಂದೆ ಜೈನ ಸಮುದಾಯದ ಹಿರಿಯರು ಭದ್ರ ಬುನಾದಿ ಹಾಕಿದ್ದರ ಫಲವಾಗಿ ಪಾಶ್ರ್ವನಾಥ ವಿದ್ಯಾಸಂಸ್ಥೆ ಕಡಿಮೆ ಶುಲ್ಕ ಪಡೆದು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇಂಗ್ಲಿಷ್ ಮಾಧ್ಯಮದ ಜೊತೆ ಭಾರತದ ಸಂಸ್ಕøತಿಯನ್ನು ಉಳಿಸಿ ಮಕ್ಕಳಲ್ಲಿ ಸಂಸ್ಕಾರವನ್ನು ಕಲಿಸುತ್ತಿರುವುದು ಸುಲಭವಲ್ಲ ಎಂದು ಶ್ಲಾಘಿಸಿದರು.

ದೇಶದ ಪ್ರಧಾನಿ ಮೋದಿ ಕರೆಯಂತೆ ಭೇಟಿ ಬಚಾವೋ ಭೇಟಿ ಪಡಾವೋ ಹೆಣ್ಣು ಮಕ್ಕಳಿಗಾಗಿ ಪಿ.ಯು.ಸಿ. ತೆರೆಯಲು ಮುಂದಾಗಿದ್ದು, ಅನುಮತಿ ಸಿಕ್ಕಿದೆ. ಶೀಘ್ರವೇ ಪಿ.ಯು.ಕಾಲೇಜು ಆರಂಭಿಸಲು ಸರ್ಕಾರ ಮಟ್ಟದಿಂದ ಆಗಬೇಕಾದ ಕೆಲಸಕ್ಕೆ ಪ್ರಾಮಾಣಿಕವಾಗಿ ಕೈಜೋಡಿಸುವ ಭರವಸೆ ನೀಡಿದ ಕೆ.ಎಸ್.ನವೀನ್ ಶಿಕ್ಷಣದ ಜೊತೆ ಮಕ್ಕಳಿಗೆ ಸಂಸ್ಕಾರ, ಮಾನವೀಯತೆ, ಗುರು-ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು ಎಂದು ಹೇಳಿದರು.

ಹೆಚ್ಚು ಶಿಕ್ಷಣ ಪಡೆದವರು ಅಂಧಕಾರದಲ್ಲಿ ಬದುಕುತ್ತಿದ್ದಾರೆ. ಅಹಿಂಸಾ ಗುಣ ಜೈನರಲ್ಲಿದೆ. ಮಕ್ಕಳಲ್ಲಿ ದೇಶಭಕ್ತಿಯನ್ನು ಶಿಕ್ಷಣ ಸಂಸ್ಥೆಗಳು ಮೂಡಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಮಾನತೆಯಿಂದ ಪ್ರತಿಯೊಬ್ಬರು ಶಿಕ್ಷಣ ಪಡೆಯುವಂತಾಗಿದೆ. ಶಿಕ್ಷಣ ಕೇವಲ ಅಂಕಗಳಿಗಷ್ಟೆ ಸೀಮಿತವಾಗಿರಬಾರದು. ಆತ್ಮವಿಶ್ವಾಸದಿಂದ ಬದುಕುವ ಶಿಕ್ಷಣ ನೀಡಿದಾಗ ಮಾತ್ರ ಜೀವನದಲ್ಲಿ ಎಂತಹ ಕಷ್ಟದ ಸನ್ನಿವೇಶ ಎದುರಾದರೂ ದೃತಿಗೆಡದೆ ಬದುಕಬಹುದು ಎಂದು ತಿಳಿಸಿದರು.

ದೇಶದಲ್ಲಿ ವಿಚಿದ್ರಕಾರಕ ಶಕ್ತಿಗಳು ಹೆಚ್ಚುತ್ತಿವೆ. ಶಿಕ್ಷಕರು, ಪೋಷಕರುಗಳು ಮಕ್ಕಳಿಗೆ ಊರುಗೋಲಾಗಿ ನಿಲ್ಲಬೇಕು. ಪಾಶ್ರ್ವನಾಥ ವಿದ್ಯಾಸಂಸ್ಥೆಗೆ ತ್ಯಾಗದ ಗುಣವಿದೆ. ಕಠಿಣ ಪರಿಶ್ರಮದಿಂದ ಮಕ್ಕಳು ಓದಿದಾಗ ಮುಂದೆ ಜೀವನದಲ್ಲಿ ಸುಖವಾಗಿರಬಹುದು ಎಂದು ಕಿವಿಮಾತು ಹೇಳಿದರು.

ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿಗ್ಯಾನಪ್ರಭಾ ಸುರೀಶ್ವರ್‍ಜಿ ಆಶೀರ್ವಚನ ನೀಡುತ್ತ ಶಿಕ್ಷಣದಿಂದ ಮಾತ್ರ ಅಜ್ಞಾನದಿಂದ ಹೊರಬರಬಹುದು. ವಿವೇಕವಿಲ್ಲದವರ ಜೀವನ ಪಶು ಪ್ರಾಣಿಗಳಿಗಿಂತಲೂ ಕಡೆಯಾಗಿರುತ್ತದೆ. ಪ್ರತಿ ಮಗುವು ಶಿಕ್ಷಣ ಪಡೆದು ಅಂಧಕಾರದಿಂದ ಹೊರಬರಬೇಕು ಎಂದು ತಿಳಿಸಿದರು. ಪಾಶ್ರ್ವನಾಥ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಬುಲಾಲ್‍ಜೀ ಪಟಿಯಾತ್ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಅರಿಷ್ಟರ ರತ್ನಶ್ರಿಜೀ, ರಂಜಿತ್ ಪಟಿಯತ್, ಜುಟ್‍ಮಲ್‍ಜಿ, ಬಿಜೆಪಿ.ಯುವ ಮುಖಂಡ ಹನುಮಂತೆಗೌಡ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಉತ್ತಮ್‍ಚಂದ್ ಸುರಾನ, ಕಾರ್ಯದರ್ಶಿ ಸುರೇಶ್‍ಕುಮಾರ್, ಜಂಟಿ ಕಾರ್ಯದರ್ಶಿ ಸುರೇಶ್ ಮುತ್ತ, ಖಜಾಂಚಿ ರಾಜೇಂದ್ರ ದಲೇಶ, ನಿರ್ದೇಶಕರುಗಳಾದ ಮುಕೇಶ್ ಸೋನ್‍ವಾಡಿಯ, ಬಿ.ಸುರೇಶ್ ಪಟಿಯಾತ್, ವಿಫುಲ್ ಜೈನ್, ಜವೇರಿಲಾಲ್, ಮಹಾವೀರ್ ದರ್‍ಲೇಶ, ಆಶಿಕ್‍ಕುಮಾರ್ ವೇದಿಕೆಯಲ್ಲಿದ್ದರು.
ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!